ಅರಣ್ಯ ವನ್ಯಜೀವಿ
ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ಓರ್ವ ಬಲಿ
ಕುಶಾಲನಗರ, ಏ 15: ಪೊನ್ನಂಪೇಟೆ ತಾಲೂಕು ಬೀರುಗ ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ. ಆನೆ ತುಳಿತಕ್ಕೆ ಒಳಗಾದ ಅಯ್ಯಮಾಡ ಮಾದಯ್ಯ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.