ಕುಶಾಲನಗರ, ಮಾ 26: ಲೋಕಸಭಾ ಚುನಾವಣೆ ಬೆನ್ನಲ್ಲೇ ಮೊಳಗಿದ ಚುನಾವಣಾ ಬಹಿಷ್ಕಾರದ ಕೂಗು ಮೊಳಗಿದೆ.
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಪ್ರಕಾಶ ಬಡಾವಣೆ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ್ದು, ಕಳೆದ 6 ತಿಂಗಳಿಂದ ಬಗೆಹರಿಯದ ಚರಂಡಿ ಸಮಸ್ಯೆಗೆ ಆಕ್ರೋಷ ವ್ಯಕ್ತಪಡಿಸಿರುವ ಬಡಾವಣೆ 20 ಕುಟುಂಬಗಳು ಈ ಸಂಬಂಧ ತಹಸೀಲ್ದಾರ್ ಹಾಗೂ ಗ್ರಾಪಂ ಗೆ ಮನವಿ ಪತ್ರ ಸಲ್ಲಿಸಿದರು.
ಚರಂಡಿ ಅವ್ಯವಸ್ಥೆಯಿಂದ ಮನೆಗಳ ಮುಂದೆ ಚರಂಡಿ ತ್ಯಾಜ್ಯ ನೀರು ಮಡುಗಟ್ಟುತ್ತಿದ್ದು ಸಾಂಕ್ರಾಮಿಕ ರೋಗ ಭೀತಿ ಹಾಗೂ ಸಹಿಸಲಸಾಧ್ಯವಾದ ದುರ್ವಾಸನೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿಗಳಾದ ಸುಗುಣಾನಂದ, ಕೃಷ್ಣ, ಜಾಜಿ ರಾಮಚಂದ್ರ, ಗೋವಿಂದ, ಗಾಯತ್ರಿ ಮತ್ತಿತರರು ಅಳಲು ತೋಡಿಕೊಂಡರು. ಕೂಡಲೆ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದರು.
ಮನವಿ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಗ್ರಾಪಂ ಜನಪ್ರತಿನಿಧಿಗಳೊಂದಿಗೆ ಪರಿಶೀಲನೆ ನಡೆಸಿದರು. ತಾತ್ಕಾಲಿಕವಾಗಿ ಇಂಗು ಗುಂಡಿ ನಿರ್ಮಿಸಿ ತ್ಯಾಜ್ಯ ಶೇಖರಿಸಿ ವಿಲೇವಾರಿಗೊಳಿಸಲು ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಪಿಡಿಒ ಸಂತೋಷ್, ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.
Back to top button
error: Content is protected !!