ಸಭೆ
ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಿಗೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಮಾ 09: ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಕೊಡಗು ಜಿಲ್ಲೆಗೆ ಪ್ರಥಮವಾಗಿ ಭೇಟಿ ನೀಡಿದ ಮೆಹರೋಜ್ ಖಾನ್ ಅವರನ್ನು ಕೊಡಗು-ಮೈಸೂರು ಗಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತರ ಕೊಡಗು ಜಿಲ್ಲಾ ಸಮಿತಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮೆಹರೋಜ್ ಖಾನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಇದೇ ಸಂದರ್ಭ ಕುಶಾಲನಗರ ಪುರಸಭಾ ಸದಸ್ಯ ಶೇಖ್ ಖಲೀಮುಲ್ಲಾ ನಿವಾಸಕ್ಕೆ ತೆರಳಿದ ಮೆಹರೋಜ್ ಖಾನ್ ಕಾಂಗ್ರೆಸ್ ಪ್ರಮುಖರೊಂದಿಗೆ ಚರ್ಚಿಸಿದರು. ಗ್ಯಾರೆಂಟಿ ಅನುಷ್ಠಾನ ಸಂಬಂಧ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಅವರು, ಶೇ. 85 ರಿಂದ 90 ರಷ್ಟು ಮಂದಿಗೆ ಗ್ಯಾರೆಂಟ್ ಯೋಜನೆಗಳು ತಲುಪಿವೆ. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆ ನಮಗೆ ಅತ್ಯಂತ ಪ್ರಮುಖವಾಗಿದೆ. ಗ್ಯಾರೆಂಟಿ ಯೋಜನೆಗಳನ್ನು ಎಲ್ಲರಿಗೂ ಸಮರ್ಪಕವಾಗಿ ತಲುಪಿಸುವುದರೊಂದಿಗೆ ನಮ್ಮ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ನಾವು ಪಣತೊಡಬೇಕಿದೆ ಎಂದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಮುಖರಾದ ಹನೀಫ್, ರಜಾಕ್, ಅಬ್ದುಲ್ ಲತೀಫ್, ಯಾಕೂಬ್, ಪೋರ್ ಶೆರಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸದಸ್ಯ ನಟೇಶ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾರ್ಮಿಕ ಘಟಕದ ಶಿವಶಂಕರ್ ಸೇರಿದಂತೆ ಪ್ರಮುಖರಾದ ಸೈಯದ್ ಬಾವಾ, ಕೋಲುಮಂಡ ರಫೀಕ್, ಟಿ.ಪಿ.ಹಮೀದ್, ಮುನ್ನಾ, ಶರ್ಫುದ್ದಿನ್, ಆದಂ, ರೋಷನ್, ಮತ್ತಿತರರು ಇದ್ದರು.
ನಂತರ ಉಪಹಾರ ಸೇವಿಸಿದ ಅವರು ಮಡಿಕೇರಿಗೆ ತೆರಳಿದರು.