ಸಿದ್ದಾಪುರ, ಮಾ 06 : ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರಮಂಡಳಿ ವತಿಯಿಂದ ಕೆ ವಿ ಜಿ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ ಮತ್ತು ಸ್ವರ್ಣ ಕ್ಲೀನಿಕ್ ನೆಲ್ಯಹುದಿಕೇರಿ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ, ಉಚಿತ ಔಷಧಿ ವಿತರಣೆ ಹಾಗೂ ರಕ್ತ ಧಾನ ಶಿಭಿರವು ತಾ 10 ರಂದು ನೆಲ್ಯಹುದಿಕೇರಿಯ ಶಾದಿ ಮಹಲ್ ನಲ್ಲಿ ನಡೆಯಲಿದೆ ಎಂದು ಶ್ರೀ ವಿನಾಯಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ತಾ 10 ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ,ಉಚಿತ ಔಷಧಿ ವಿತರಣೆ ಹಾಗೂ ರಕ್ತಧಾನ ಶಿಭಿರ ನಡೆಯಲಿದ್ದು,
ಶಿಭಿರದಲ್ಲಿ ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸೆ, ಮಕ್ಕಳ ರೋಗ, ಕಿವಿ, ಮೂಗು, ಗಂಟಲು ರೋಗ, ನೇತ್ರ ಚಿಕಿತ್ಸೆ, ದಂತ ಚಿಕಿತ್ಸೆ ಚರ್ಮ ಮತ್ತು ಲೈಂಗಿಕ ರೋಗ, ಸ್ತ್ರೀ ರೋಗ, ಎಲುಬು ಮತ್ತು ಕೀಲು, ಶ್ವಾಸಕೋಶ ಸಂಭಂದಿಸಿದ ವಿಭಾಗಳಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ನುರಿತ ತಜ್ಞ ವೈದ್ಯರುಗಳು ಲಭ್ಯವಿರಲಿದ್ದು ಸಾರ್ವಜನಿಕರು ಶಿಭಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಗೋಷ್ಠಿಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಟಿ ಆರ್ ಮಣಿ,ಕೋಶಾಧಿಕಾರಿ ಮನೋಜ್, ಶ್ರೀ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಪ್ರಭಾಕರ್, ಹಾಜರಿದ್ದರು.
Back to top button
error: Content is protected !!