ಕುಶಾಲನಗರ, ಜ 24:: ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಪಕ್ಷಾತೀತವಾಗಿ ಎಲ್ಲರೂ ಬರಮಾಡಿಕೊಂಡು ಕೊಡಗಿಗೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಗಮನಸೆಳೆಯುವಂತಾಗಬೇಕಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರರೂ ಆದ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಕರೆ ನೀಡಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿಗೆ ಆಗಬೇಕಿರುವ ಕೆಲಸ ಕಾರ್ಯಗಳು ಹಲವಷ್ಟಿವೆ. ಎಲ್ಲದಕ್ಕೂ ವಿಧಾನಸೌಧಕ್ಕೆ ಹೋಗಿ ಗಮನ ಸೆಳೆಯುವ ಅಗತ್ಯವಿದ್ದು, ಜನವರಿ 25 ರಂದು ಕೊಡಗಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿಯಿರುವ ಮುಖ್ಯಮಂತ್ರಿಗಳ ಭೇಟಿಯನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕಿದೆ ಎಂದರು. ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿ ಯಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ. ಈ ನಿಟ್ಟಿನಲ್ಲಿ ಎಲ್ಲಾ ಮಿತ್ರ ಪಕ್ಷಗಳು ಅವರಲ್ಲಿ ಆಗಬೇಕಿರುವ ವಿಚಾರಗಳ ಬಗ್ಗೆ ಗಮನಸೆಳೆಯಕು ಇದೊಂದು ಸುವರ್ಣಾವಕಾಶ.ಇವರೊಂದಿಗೆ ವಿವಿಧ ಇಲಾಖೆ ಸಚಿವರೂ ಕೂಡ ಪಾಲ್ಗೊಳ್ಳುತ್ತಿದ್ದು ಅನುಕೂಲವಾಗಲಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಕೊಡಗಿಗೆ ಆಗಮಿಸಿದ್ದ ಸಂದರ್ಭ ಉಂಟಾದ ಕಹಿ ಅನುಭವದಂತೆ ಈ ಬಾರಿಯೂ ಆಗದೆ ಸಿಹಿ ಅನುಭವ ಉಂಟಾಗಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಅವರನ್ನು ಆಹ್ವಾನಿಸಿ ಅಹವಾಲು ಸಲ್ಲಿಸುವಂತಾಗಬೇಕಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ,ಕೊಪ್ಪ ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರ ಬಳಿ ಕಾವೇರಿ ನದಿ ತಟಕ್ಕೆ ತಡೆಗೋಡೆಗೆ ಹೆಚ್ಚುವರಿ 10 ಕೋಟಿ ಅನುದಾನಕ್ಕೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದೆ. ಕುಶಾಲನಗರ ಕ್ಕೆ ಕೃಷಿ ಹಾಗೂ ಕಾನೂನು ಕಾಲೇಜು ಅಗತ್ಯವಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಹಿಂದೆ ಕೈಗೊಂಡ ಶಪಥದಂತೆ ಬಿಜೆಪಿಯನ್ನು ಸೋಲಿಸಿದ ಮತದಾರರಿಗೆ ಅವರು ಧನ್ಯವಾದ ಸಲ್ಲಿಸಲಿದ್ದಾರೆ ಎಂದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ, ಮುಖಂಡ ಹರೀಶ್ ಇದ್ದರು.
Back to top button
error: Content is protected !!