ಕುಶಾಲನಗರ ಡಿ 29: ಇಲ್ಲಿ ಬಂದು ಹೋಗುವ ಭಕ್ತರಿಗೆ ಅಭಯ ಪ್ರದಾನ ಲಭಿಸುತ್ತದೆ. ಭಕ್ತರು ಲೌಕಿಕ ಸಂಕಷ್ಟಗಳಲ್ಲಿ ನೊಂದು ಬೆಂದು ಬೇಸತ್ತು ಸ್ವಾಮಿಯಲ್ಲಿ ಪರಿಹಾರಕ್ಕಾಗಿ ಪ್ರಾರ್ಥನೆಗೆ ಬಂದಾಗ ಇಲ್ಲಿ ತುಂಬೆ ಹೂವಿನ ಪ್ರಸಾದ ಅಪ್ಪಣೆ ಎನ್ನುವ ಒಂದು ವಿಶೇಷ ಪದ್ದತಿಯ ಮೂಲಕ ಭಕ್ತರ ಪರಿಹಾರಕ್ಕಾಗಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ. ಶರಣಾದ ಭಕ್ತರಿಗೆ ಗುರುವು ಅಭಯ ಪ್ರಧಾನವಿಟ್ಟು ಸಂಕಷ್ಟಗಳು ದೂರಾಗಿ ಭಕ್ತರು ನೆಮ್ಮದಿಯನ್ನು ಕಾಣುವ ವಾಡಿಕೆ ಈ ಕ್ಷೇತ್ರದಲ್ಲಿ ನಡೆದು ಬಂದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ಮನೆಹಳ್ಳಿ ಶ್ರೀ ತಪೋಕ್ಷೇತ್ರಬಾಭಿವೃದ್ದಿ ಸೇವಾ ಮಂಡಳಿಯಿಂದ 22 ನೇ ವರ್ಷದ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೇ ನೀಡಿದ ನಂತರ ಅರ್ಶಿವಚನ ನೀಡಿದ ಅವರು ಶ್ರೀ ಗುರುಸಿದ್ದ ವೀರೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಯತಿಗಳ ರೂಪದ ಬದಲಾಗಿ ಬಸವನ ವಿಗ್ರಹವಿರುತ್ತದೆ. ಭಕ್ತರು ಸ್ವಾಮಿಯನ್ನು ದರ್ಶಿಸಲು ಬಂದಾಗ ಬಸವನ ವಿಗ್ರಹಕ್ಕೆ ನಮಸ್ಕರಿಸಿದರೂ ಕೂಡ ಯತಿಗಳಿಗೆ ನಮಸ್ಕರಿಸಿದಾಂತಾಗುತ್ತದೆ.
ಶ್ರೀ ಕ್ಷೇತ್ರಾಧ್ಯಕ್ಷರಾಗಿರುವ ಶ್ರೀ ಮಹಾಂತಶಿವಲಿಂಗಮಹಾಸ್ವಾಮಿಗಳು ಶ್ರಮವಹಿಸಿ ಶ್ರೀ ಕ್ಷೇತ್ರದ ಸವಿಸ್ತಾರವಾಗಿ ಮಾಡಿದ್ದಾರೆ, ಅಜ್ಲಾತವಾಗಿದ್ದ ಈ ಮನೆಹಳ್ಳಿ ಶ್ರೀ ಕ್ಷೇತ್ರವನ್ನಾಗಿಸಲು ಅನುಗ್ರಹಿಸಿ ಕ್ಷೇತ್ರಕ್ಕೆ ಹಲವು ಶಿಷ್ಯರೊಡಗೂಡಿ ಕಳುಹಿಸಿ ನೆಲೆನಿಲ್ಲುವಂತೆ ಮಾಡಿ ಇಂದು ಕ್ಷೇತ್ರವು ರೂಪಗೊಳ್ಳಲು ನಾದಿಯಾಯಿತು ಎಂದರು.
ಶ್ರೀಕ್ಷೇತ್ರದ ಮಠಾಧ್ಯಕ್ಷರು . ಶ್ರೀ ಮಹಾಂತಶಿವಲಿಂಗಸ್ವಾಮಿಜಿಯವರು ಅಧ್ಯಕ್ಷತೆ ಮಹಿಸಿ ಅರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರಸ್ವಾಮಿಜಿ,ವ ದೊಡ್ಡಬಳ್ಳಾಪುರ ಮಠದ ಶ್ರೀಗಳು, ಕಲ್ಲಹಳ್ಳಿ ಮಠ ಶ್ರೀ ರುದ್ರಮುನಿಸ್ವಾಮೀಜಿ, ಬೆಂಗಳೂರು, ಸಿಟಿ.ಸಿವಿಲ್ ನ್ಯಾಯದೀಶರು ಜಯಶ್ರೀ ಅವರು ಅವರ ಅನಿಸಿಕೆಗಳನ್ನು ತಿಳಿಸಿದರು.
ವಕೀಲರು, ಚಂದ್ರಮೌಳಿ,
ಮಲ್ಲಿಕಾರ್ಜುನ , ಹಾಲಪ್ಪ, ಕೊಡಗು ಜಿಲ್ಲಾ ಮಹಾಸಭಾ ಅಧ್ಯಕ್ಷರು ಶಿವಪ್ಪ, ಕೊಡ್ಲಿಪೇಟೆ ವೇ. ಸೋಮಶೇಖರಶಾಸ್ತ್ರಿ, ಉಪಾಧ್ಯಕ್ಷರು ಕಾಂತರಾಜು, ರವಿಶಂಕರ್, ಜಯಕುಮಾರ್, ಜಗದೀಶ್, ಅರುಣ್, ಈಶ್ವರಪ್ಪ, ಓಕಾಂರ್ ಪಾಟೀಲ್ , ಚಂದ್ರಶೇಖರ್, ಮುಂತಾದವರು ಭಾಗವಹಿಸಿದ್ದರು
ಕುಶಾಲನಗರ ಅಕ್ಕನಬಳದವತಿಯಿಂದ ಪ್ರಾರ್ಥನೆ ಮಾಡಿದರು.
Back to top button
error: Content is protected !!