ಕ್ರೈಂ

ಎಸ್ಟೇಟ್ ಮಾಲೀಕನ ಹತ್ಯೆ ಪ್ರಕರಣ: ಆರೋಪಿ ಸ್ನೇಹಿತನ ಬಂಧನ.

ಹಣಕ್ಕಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಉತ್ತರ ಪ್ರದೇಶ ಮೂಲದ ಸತೀಶ್ ದುಭೆ ಬಂಧನನ

ಹುಣಸೂರು, ಡಿ‌ 24:
ಹುಣಸೂರು ನಗರದಲ್ಲಿ ನಡೆದಿದ್ದ ಕೊಡಗಿನ ಎಸ್ಟೇಟ್ ಮಾಲಿಕ ಚಂಗಪ್ಪ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತ: ಉತ್ತರಪ್ರದೇಶದ, ಪ್ರಸ್ತುತ ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಚಂಗಪ್ಪರ ಸ್ನೇಹಿತ ಸತೀಶ್ ದುಬೆ ಬಂಧಿತ ಆರೋಪಿ. ಆರೋಪಿ ಸತೀಶ್ ದುಬೆ ಚೆಂಗಪ್ಪರ ಸ್ನೇಹಿತನೇ ಆಗಿದ್ದು, ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಹಿನ್ನೆಲೆ: ಡಿ.೨೦ರಂದು ನಗರದ ದೇವರಾಜುಅರಸು ಪ್ರತಿಮೆ ಬಳಿ ಇರುವ ಭವಾನಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಚಂಗಪ್ಪನ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ.ಸೀಮಾಲಾಟ್ಕರ್‌ರವರು ಆರೋಪಿಗಳ ಪತ್ತೆಗಾಗಿ ಡಿವೈಎಸ್‌ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಇನ್ಸ್ಪೆಕ್ಟರ್‌ಗಳಾದ ದೇವೇಂದ್ರ ಮತ್ತು ದೀಪಕ್‌ರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡವು ಒಂದೇ ದಿನದಲ್ಲಿ ಕೊಲೆಯಾದ ವ್ಯಕ್ತಿಯ ಪತ್ತೆ ಹಚ್ಚಿದ್ದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸತೀಶ್ ದುಬೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಸ್.ಪಿ.ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಘಟನೆ ವಿವರ:
ಡಿ.೧೯ರಂದು ಕೊಡಗು ಜಿಲ್ಲೆ ಪಾಲಿಬೆಟ್ಟದ ಯಡಿಯೂರಿನ ಶಾಂತಿ ಬೀದಿ ಎಸ್ಟೆಟ್‌ನ ಮಾಲಿಕ ಲೇ.ಕಾಳಪ್ಪರ ಪುತ್ರ ಚಂಗಪ್ಪ(೫೩) ಸತೀಶ್ ದುಬೆ ಸ್ನೇಹಿತರಾಗಿದ್ದು, ಕೊಡಗಿನಲ್ಲಿ ತಮ್ಮ ಸಂಬಂದಿ ಸಾವಿನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಬಂದಿದ್ದದ್ದರು. ರಾತ್ರಿ ಬೆಂಗಳೂರಿಗೆ ವಾಪಸ್ ತೆರಳುವ ಸಂದರ್ಭದಲ್ಲಿ ಸ್ನಾನ ಮಾಡಲು ಹೆದ್ದಾರಿ ಬದಿಯ ಹುಣಸೂರಿನ ಡಿ.ಎಲ್.ಬಾರ್‌ನಲ್ಲಿ ರೂಂ ಮಾಡಿದ್ದರು. ಈ ವೇಳೆ ಕಾರು ಚಾಲಕ ಕಾರ್ಯ ನಿಮಿತ್ತ ತುರ್ತಾಗಿ ಹೋಗಬೇಕೆಂದು ಬಾಡಿಗೆ ಹಣ ಪಡೆದು ರಾತ್ರಿಯೇ ವಾಪಸ್ ತೆರಳಿದ್ದಾರೆ. ನಂತರ ಬಾರ್‌ನಲ್ಲೇ ಸ್ನೇಹಿತಬ್ಬರು ಕುಡಿದು ಗಲಾಟೆ ಮಾಡಿಕೊಂಡು ಇಟ್ಟಿಗೆ ಫ್ಯಾಕ್ಟರಿ ಬಳಿ ಬಂದಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡು ಚೆಂಗಪ್ಪ ಆಯತಪ್ಪಿ ಕೆಳಕ್ಕೆ ಬಿದ್ದವೇಳೆ ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದೆನೆಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ:
ಪ್ರಕರಣ ಭೇಧಿಸಿರುವ ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್‌ಗಳಾದ ದೇವೇಂದ್ರ, ದೀಪಕ್, ಎಸ್.ಐ.ಜಮೀರ್‌ಅಹಮ್ಮದ್, ಸಿಬ್ಬಂದಿ ಪ್ರಭಾಕರ್, ಅರುಣ್, ಯೋಗೇಶ್, ರಾಜೇಗೌಡ, ಮಂಜುನಾಥ, ಅನಿಲ್‌ಕುಮಾರ್, ಮನೋಹರ, ಇರ್ಫಾನ್‌ರವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾಲಾಟ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!