ಕುಶಾಲನಗರ ಡಿ 23: ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯಿತು.
ಶ್ರೀ ವಿಷ್ಣುವಿಗೆ ವಿಶೇಷ ಅಲಂಕಾರ ಮಾಡಿ ವೈಕುಂಠ ದ್ವಾರ ಪ್ರವೇಶಿಸಲು ಭಕ್ತರಿಗೆ ಆರ್ಯವೈಶ್ಯ ಮಂಡಳಿ ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿ ಶ್ರೀ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ದಿನ. ಈ ಏಕಾದಶಿಯಂದು ದೇವಾನುದೇವತೆಗಳು ಭೂಲೋಕಕ್ಕೆ ಬಂದು ಜಗದೊಡೆಯ ಶ್ರೀ ವಿಷ್ಣುವನ್ನು ಪೂಜಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ಮಾತನಾಡಿ, ಈ ಮಾಸದ ಪ್ರಥಮ ಏಕಾದಶಿ, ಅಂದರೆ ವೈಕುಂಠ ದ್ವಾರ ತೆಗೆಯುವ ದಿನವೆಂದು ಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ದಿನ ಮಹಾವಿಷ್ಣುವಿಗೆ ಮಹಾ ಪಂಚಾಮೃತ ಅಭಿಷೇಕ, ಮಹಾ ಪೂಜೆ ಮತ್ತು ವೈಕುಂಠ ದ್ವಾರದ ಪೂಜೆ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆಯಿಂದ, ಭಕ್ತಿಯಿಂದ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಇವತ್ತು ವಿಷ್ಣು ಸನ್ನಿಧಾನದಲ್ಲಿ ವೈಕುಂಠ ದ್ವಾರ ಪ್ರವೇಶ ಮಾಡಿದರೆ ಪಾಪ ಕರ್ಮಗಳು ಪರಿಹಾರವಾಗುತ್ತೆ ಎನ್ನುತವ ನಂಬಿಕೆಯಿದೆ ಎಂದು ತಿಳಿಸಿದರು.
ಪೂಜೋತ್ಸವ ಸಂದರ್ಭ ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಬಿ.ಎಲ್.ಅಶೋಕಕುಮಾರ್, ಎಸ್.ಎನ್.ನಾಗೇಂದ್ರ, ಬಿ.ಆರ್.ನಟರಾಜ್, ಪೂಜಾ ಸೇವಾರ್ಥದಾರರಾದ ನಾಗಪ್ರವೀಣ್, ವಿ.ಆರ್.ಮಂಜುನಾಥ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ಇತರರು ಹಾಜರಿದ್ದರು.
Back to top button
error: Content is protected !!