ಕುಶಾಲನಗರ,ನ 06: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯ 59/1ಎ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ ವತಿಯಿಂದ ತಹಸೀಲ್ದಾರರಿಗೆ ದೂರು ನೀಡಲಾಗಿದೆ.
ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ಬಸವೇಶ್ವರ ಬಡಾವಣೆಯ ಲೇಟ್ ಬಿ.ಟಿ.ಸ್ವಾಮಿರವರ ಹಿರಿಯ ಪುತ್ರ ಅಭಿಷೇಕ್ ಹಾಗೂ ಕಿರಿಯ ಪುತ್ರ ಮಹೇಶ್ ಎಂಬುವವರು ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಸ್ಥಳೀಯ ವಾರ್ಡ್ ಸದಸ್ಯರ ಸೂಚನೆಯಂತೆ ತಹಶಿಲ್ದಾರರಿಗೆ ದೂರು ನೀಡಲಾಗಿದೆ.
ಪೈಸಾರಿ ಜಾಗದಲ್ಲಿ ಮಣ್ಣು ಸಾಗಾಟ ಮಾಡುವುದಲ್ಲದೇ ಪೈಸಾಗಿ ಜಾಗವನ್ನು ಅತಿಕ್ರಮಿಸಿ ಅಮಾಯಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆಯೂ ಸ್ಥಳೀಯರಿಂದ ದೂರು ಕೇಳಿಬಂದಿದ್ದು, ಇದರ ವಿರುದ್ಧ ಕೂಡ ಕೆಲವು ತಿಂಗಳ ಹಿಂದೆ ತಹಶಿಲ್ದಾರರಿಗೆ ಪಂಚಾಯಿತಿಯಿಂದ ಲಿಖಿತ ದೂರು ನೀಡಲಾಗಿತ್ತು. ಇದೀಗ ಮತ್ತೇ ಮಣ್ಣು ಸಾಗಾಟ ಮಾಡಿ, ಸರ್ಕಾರಿ ಜಾಗ ಒತ್ತುವರಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಗಮನಹರಿಸಿ, ಮಣ್ಣು ಸಾಗಾಟಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಮಣ್ಣು ಸಾಗಾಟದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಸವೇಶ್ವರ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ಒಂದು ಹಿಟಾಚಿ ಹಾಗೂ ಐದಕ್ಕೂ ಹೆಚ್ಚು ಟಿಪ್ಪರ್ ಗಳನ್ನು ಬಳಸಿ ಮಣ್ಣು ಸಾಗಾಟ ಮಾಡುತ್ತಿದ್ದು, ನಿರಂತರವಾಗಿ ಟಿಪ್ಪರ್ ಓಡಾಟದಿಂದ ಸಾರ್ವಜನಿಕ ರಸ್ತೆ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸ್ಥಳೀಯ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಅಕ್ರಮವಾಗಿ ಮಣ್ಣು ಸಾಗಾಟ ಮಾಡಿತ್ತಿರುವ ಬಗ್ಗೆ ಸರ್ಕಾರಿ ಜಾಗ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಸ್ಥಳಪರಿಶೀಲನೆ ನಡೆಸಲಾಯಿತು. ನಂತರ ದಾಖಲೆ ಸಮೇತ ತಾಲ್ಲೂಕು ದಂಡಾಧಿಕಾರಿಗಳಿಗೆ ಪಂಚಾಯಿತಿ ವತಿಯಿಂದ ಲಿಖಿತ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಸಿ.ಜಯಪ್ರಕಾಶ್ ಮಾತನಾಡಿ, ಸರ್ಕಾರಿದಲ್ಲಿ ಮಣ್ಣು ಸಾಗಾಟ ಮಾಡಿ ಮಣ್ಣು ದಂಧೆ ನಡೆಸಲಾಗುತ್ತಿದೆ. ಅಲ್ಲದೇ ಸರ್ಕಾರಿ ಜಾಗ ಒತ್ತುವರಿ ಮಾಡಿ, ಮಾರಾಡ ಮಾಡಲಾಗುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ತಹಶಿಲ್ದಾರರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳ ಪರಿಶೀಲನೆ ವೇಳೆ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಪಿಡಿಒ ಸಂತೋಷ್ ಹಾಗೂ ಗ್ರಾಮಸ್ಥರು ಇದ್ದರು.
Back to top button
error: Content is protected !!