ಕುಶಾಲನಗರ, ಅ 21: ಶುಚಿತ್ವ ಪ್ರತಿಯೊಬ್ಬರ ಕರ್ತವ್ಯ. ಪರಿಸರವನ್ನು ಶುಚಿಗೊಳಿಸಿದರೆ ಆರೋಗ್ಯವನ್ನು ಕಾಪಾಡಬಹುದು ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಗಿರಿಧರ್ ಹೇಳಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ, ರೋವರ್ ಮತ್ರು ರೇಂಜರ್ ಘಟಕ, ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಲಾದ ಸ್ಚಚ್ಚ ಭಾರತ್ ಅಭಿಯಾನ್ ಮತ್ತು ಕಾಲ್ನಡಿಗೆ ಜಾಗೃತಿ ಜಾಥವನ್ನು ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನಾಂಗ ಶುಚಿತ್ವಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ.ಅದರಲ್ಲೂ ಕಾಲೇಜಿನ ವಾತಾವರಣವನ್ನು ಸ್ಚಚ್ಚವಾಗಿಟ್ಟುಕೊಂಡರೆ ಶುಭ್ರ ಗಾಳಿಯ ವಾತಾವರಣ ಸಿಗಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪ್ರವೀಣ್ ಅವರು ಮಾತನಾಡಿ, ವಿದ್ಯಾರ್ಥಿಗಳು ಕಸಗಳನ್ನು ಅಲ್ಲಲ್ಲಿ ಎಸೆಯದೇ ಕಸದ ತೊಟ್ಟಿಗಳಲ್ಲಿ ಹಾಕುವುದರ ಮೂಲಕ ಸ್ವಚ್ಚತಾ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದರು.
ನಂತರ ಕಾಲೇಜಿನ ಆವರಣದಿಂದ ಸುಂದರನಗರದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಕಸ, ಕಡ್ಡಿ, ತ್ಯಾಜ್ಯಗಳನ್ನು, ಬಾಟಲಿಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಹಾಕುವುದರ ಮೂಲಕ ಶ್ರಮ ದಾನವನ್ನು ಮಾಡಲಾಯಿತು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ರಶ್ಮಿ ಎಂ, ವಂದನ ಕೆ.ಆರ್, ಡಾ.ಹರ್ಷ ಬಿ.ಡಿ. ರಮೇಶ್ಚಂದ್ರ ಪಿ. ಸುಧಾಕರ್ ಟಿ.ಎಂ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಸುನೀಲ್ ಕುಮಾರ್ ಎಸ್, ರೇಂಜರ್ ಘಟಕದ ಸಂಚಾಲಕಿ ಕುಸುಮ ಕೆ.ಪಿ, ದೈಹಿಕ ನಿರ್ದೇಶಕಿ ಜಯಂತಿ, ಉಪನ್ಯಾಸಕರಾದ ಮನೋಜ್,ಚರಣ್ ರಾಜ್, ನಟರಾಜ್, ಲೋಹಿತ್, ಸಿದ್ದರಾಮೇ ಗೌಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
Back to top button
error: Content is protected !!