ಕುಶಾಲನಗರ, ಸೆ 08:
ಕುಶಾಲನಗರದ ರಾಜಸ್ಥಾನ್ ಸಮಾಜದ ಮಹಿಳೆಯರಿಂದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಾಜಸ್ಥಾನ ಸಮಾಜದಲ್ಲಿ ಕೃಷ್ಣ ಹಾಗೂ ರಾಧೆಯನ್ನು ಪ್ರತಿಷ್ಠಾಪಿಸಿ ಒಂದು ದಿನ ಉಪವಾಸ ವೃತ ನಡೆಸಿದ ಮಹಿಳೆಯರು, ಶುಕ್ರವಾರ ಕೃಷ್ಣ ಹಾಗೂ ರಾಧೆಯರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಹೊತ್ತೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸಿದರು.
ಮೆರವಣಿಗೆಯುದ್ದಕ್ಕೂ ಮಹಿಖೆಯರು ಭಜನೆಗಳನ್ನು ಹಾಡುತ್ತಾ ಸಾಗಿದ್ದು ನೋಡುಗರ ಗಮನ ಸೆಳೆಯಿತು.
Back to top button
error: Content is protected !!