ಕಾರ್ಯಕ್ರಮ

10 ಲಕ್ಷ ರೂ ವೆಚ್ಚದ ಮಹಿಳಾ ಸಮಾಜ ಸಮುದಾಯ ಭವನ ಉದ್ಘಾಟನೆ

ಕುಶಾಲನಗರ ಆ 21: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಮಾರುಕಟ್ಟೆ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 10 ಲಕ್ಷ ರೂ ವೆಚ್ಚದ ಅಕ್ಕಮಹಾದೇವಿ ಮಹಿಳಾ ಸಮಾಜದ ನೂತನ ಕಟ್ಟಡದ ಉದ್ಘಾಟನೆಯನ್ನು ಶಿರಂಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜ್ ನೆರವೇರಿಸಿದರು.
ನಂತರ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರು ಸಂಘಟಿತರಾಗಿ , ಸಮಾಜವನ್ನು ರಚನೆ ಮಾಡಿಕೊಂಡು ಅದರ ಮುಖೇನ ಆರ್ಥಿಕ ಕ್ರೋಡಿಕರಣದ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಹಿಳಾ ಸಮಾಜ ಅಧ್ಯಕ್ಷೆ ಎಸ್‌ ಕೆ, ಪಾರ್ವತಮ್ಮ, ವಹಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್, ನವರ ಅನುದಾನ 5 ಲಕ್ಷ, ಸೇರಿದಂತೆ ಗ್ರಾಮದ ದೇವಾಲಯ ಸಮಿತಿಯ, ಸಹಕಾರ ಬ್ಯಾಂಕ್, ಸಹಕಾರ, ಸೇರಿದಂತೆ ವಿವಿಧ ದಾನಿಗಳ ಸಹಕಾರದೊಂದಿಗೆ ಸುಸಜ್ಜಿತವಾದ 10 ಲಕ್ಷ ರೂ ವೆಚ್ಚದ ಕಟ್ಟಡ ನಿರ್ಮಾಣಗೊಂಡಿದೆ. ಈ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೀಯ ವ್ಯಕಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಟ್ಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಗಣೇಶ್, ಕುಶಾಲನಗರ ಎ, ಪಿ, ಎಂ ಎಸ್ ನ ನಿರ್ದೇಶಕ ಲೋಕೇಶ್, ಸಹಕಾರ ಸಂಘದ ಕಾರ್ಯದರ್ಶಿ ಜೀವನ್, ಬಸವಣ್ಣಯ್ಯ, ಕಳಿಂಗಪ್ಪ, ಮಹೇಶ್ , ಶ್ರೀನಿವಾಸ್ , ಪ್ರಸನ್ನ, ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು.
ಮಹಿಳಾ ಸಮಾಜ ಕಾರ್ಯದರ್ಶಿ ಲಲಿತನವರು ಸಮಾಜ ವರದಿ ವಾಚನ ಮಂಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಮಾಜ ನಿರ್ದೇಶಕ ರತ್ನಮ್ಮ, ಸುಲೋಚನ, ವನಜಾಕ್ಷಿ, ಗೀತಾ, ಜಯಮ್ಮ, ನಾಗಮ್ಮ ಗೌರಮ್ಮ, ಸುವಿತ್ರ ಉಮಾ, ವೀಣಾ, ವೇದ ಲೋಕೇಶ್, ರೇಣುಕಾ, ಪದ್ಮಮ್ಮ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಭಾಗವಹಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!