ಕುಶಾಲನಗರ, ಆ 17:
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ಅವರ ಮೈಸೂರಿನಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಹಿನ್ನಲೆಯಲ್ಲಿ ಕುಶಾಲನಗರದ ಅವರ ಕಛೇರಿ ಮತ್ತು ವಸತಿಗೃಹ ಕೂಡ ಪರಿಶೀಲನೆ ನಡೆಸಲಾಯಿತು
ಮೈಸೂರಿನ ವಿಜಯನಗರ 4th ಸ್ಟೇಜ್ ನಲ್ಲಿರುವ ನಿವಾಸ ಹಾಗೂ ಕುಶಾಲನಗರದ ಕಛೇರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.
ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಡಿವೈಎಸ್ಪಿ ಮಾಲತೇಶ್, ಕೃಷ್ಣಯ್ಯ ಅವರ ತಂಡ ಶೋಧ ಕಾರ್ಯ ನಡೆಸಿತು.
ಪರಿಶೀಲನೆ ಸಂದರ್ಭ 2 ಕೋಟಿ ಒಂಭತ್ತು ಲಕ್ಷದ 27 ಸಾವಿರ ಮೌಲ್ಯದ ಸ್ಥಿರಾಸ್ಥಿ, ಒಂದು ಕೋಟಿ 32 ಲಕ್ಷದ 93 ಸಾವಿರ ಮೌಲ್ಯದ ಚರಾಸ್ಥಿ ಪತ್ತೆಯಾಗಿದೆ.
Back to top button
error: Content is protected !!