ಶನಿವಾರಸಂತೆ, ಆ 10:: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ಎಂ.ಮಹಮ್ಮದ್ ಹನೀಪ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ದ್ರಾಕ್ಷಾಯಿಣಿ ಉಪಾಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಎಂ.ಎಂ.ಮಹಮ್ಮದ್ ಹನೀಪ್, ಪರಿಶಿಷ್ಟ ವರ್ಗಕ್ಕೆ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ಸದಸ್ಯೆ ದ್ರಾಕ್ಷಾಯಿಣಿ ಮಾತ್ರ ನಾಮ ಪತ್ರ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಹನೀಪ್, ಉಪಾಧ್ಯಕ್ಷರಾಗಿ ದ್ರಾಕ್ಷಾಯಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ಒಟ್ಟು 9 ಮಂದಿ ಸದಸ್ಯರ ಪೈಕಿ ಲೀನಾಪರಮೇಶ್ , ರೇಣುಕಾ ಮೇದಪ್ಪ ಪಾವನ ಗಗನ್ ,ವಿನೋದ ಆನಂದ್ , ಮತ್ತು ದೊಡ್ಡಯ್ಯ
ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸದಸ್ಯರಾದ ದಿನೇಶ್ ಕುಮಾರ್ , ಮೋಕ್ಷಿಕ್ ರಾಜ್ , ಗ್ಯೆರು ಹಾಜರಾಗಿದ್ದರು. ಚುನಾವಣಾಧಿಕಾರಿಗಳಾಗಿ ಅಕ್ಷರ ದಾಸೋಹದ ಸಹ ನಿರ್ದೇಶಕ ಕಾಳನಾಯಕ್ ಮತ್ತು ತಾಲ್ಲೂಕು ಪಂಚಾಯಿತಿಯ ಸುರೇಶ್ ಕಾರ್ಯ ನಿರ್ವಹಿಸಿದರು. ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಗಿರೀಶ್, ಕಾರ್ಯದರ್ಶಿ ಅಶ್ವತ್ಥ್ ಇದ್ದರು.
ವಿಜಯೋತ್ಸವ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ,ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಸಂದರ್ಭದಲ್ಲಿ ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತಾಕೇರಿ ಸತೀಶ್ ,ಕಾಂಗ್ರೆಸ್ ವಲಯ ಅಧ್ಯಕ್ಷರುಗಳಾದ ಸುಲ್ಯೆಮಾನ್ ಬ್ಯಾಡಗೊಟ್ಟ, ಔರಂಗ್ಜೇಬ್ ಕೊಡ್ಲಿಪೇಟೆ, ಪ್ರಮುಖರಾದ ವೇದ್ಕುಮಾರ್ ,ತೇಜ್ಕುಮಾರ್,ಪುಟ್ಟರಾಜು , ವೆಂಕಟೇಶ್ ,ಎಸ್.ಎಲ್.ಮೇದಪ್ಪ ,ಕೆ.ಹೆಚ್.ರಹ್ಮಾನ್ , ತಾಲೂಕು ಪಂಚಾಯತ್ ಮಾಜಿ ಸದಸ್ಯ ಜೆ.ಆರ್.ಪಲಾಕ್ಷ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ.ಎಲ್.ಜನಾರ್ದನ್ ,ಬೂತ್ ಅದ್ಯಕ್ಷರು ಗಳಾದ ಮಹಮ್ಮದ್ ,ಗಣೇಶ್ ,ಅಶೋಕ್,ನಿಸಾರ್ ಕಿರಿಕೊಡ್ಲಿ ಇದ್ದರು
Back to top button
error: Content is protected !!