ಕುಶಾಲನಗರ, ಆ 10: ಗುಡ್ಡೆಹೊಸೂರು ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಎಂ.ಆರ್.ಮಾದಪ್ಪ
ಆಯ್ಕೆಯಾದರು.
ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರುಕ್ಮಿಣಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಹಾಗೂ ಪಟ್ಟು ಮಾದಪ್ಪ ಸ್ಪರ್ಧೆ ಮಾಡಿದ್ದರು.
18 ಜನ ಸದಸ್ಯ ಬಲದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಾದಪ್ಪ ಅವರಿಗೆ 10, ಲಕ್ಷ್ಮಣ್ ಅವರಿಗೆ 8 ಮತಗಳು ಲಭಿಸಿದವು.
ಸದಸ್ಯರಾದ ಪ್ರವೀಣ್, ಪ್ರದೀಪ್, ಎಸ್.ಎಸ್.ನಂದಿನಿ, ಯಶೋಧ, ನಾರಾಯಣ, ಶಿವಪ್ಪ, ಚಿದಾನಂದ, ಲಕ್ಷ್ನಣ, ಗಂಗಮ್ಮ, ರುಕ್ಮಿಣಿ, ಮಾದಪ್ಪ, ನಿತ್ಯಾನಂದ, ರಮೇಶ್, ಸುಶೀಲ, ಸೌಮ್ಯ, ಉಷಾ, ಸರ್ವಮಂಗಳ, ಉಮಾ ಮತದಾನದಲ್ಲಿ ಭಾಗಿಯಾಗಿದ್ದರು.
ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ತಾಪಂ ಮಾಜಿ ಸದಸ್ಯ ಸತೀಶ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಮಣಿಕಂಠ, ಇಂದಿರಾ ರಮೇಶ್, ದಿನೇಶ್, ಚಂದ್ರು, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಪುಷ್ಪಾ ನಾಗೇಶ್ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!