ಕುಶಾಲನಗರ ಜು20 : ವಾಣಿಜ್ಯ ನಗರಿ ಕುಶಾಲನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೆ ತಲುಪಿದೆ.ಸ್ಥಳೀಯವಾಗಿ ಬಡಾವಣೆಗಳ ಪಾರ್ಕ್, ಗೋಮಾಳ, ಪೈಸಾರಿ, ಹಿತ್ತಲು ನಾಯಿಮಣ್ಣು ಇತ್ಯಾದಿ ಸರ್ಕಾರಿ ಜಾಗವನ್ನು ಪ್ರಭಾವ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಿಕೊಳ್ಳುತ್ತಿರುವುದು ಇತ್ತಿಚೀನ ದಿನಗಳಲ್ಲಿ ಜಾಸ್ತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಭೂ ದಾಖಲೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿ ಗೆ ಮೀಸಲಾಗಿಟ್ಟಿದ ಜಾಗವನ್ನು ಶಾಲೆಯ ಪಕ್ಕದಲ್ಲಿ ಇರುವ ಬಡಾವಣೆಯ ಮಾಲೀಕರು ಈ ಜಾಗವನ್ನು ರಸ್ತೆ ಎಂದು ಬಿಂಬಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ಬಡಾವಣೆಯ ಉಪಯೋಗಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದು, ಗುರುವಾರ ಬಡಾವಣೆಯ ಮಾಲೀಕ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಕರು ಹಾಗೂ ತಾಲ್ಲೂಕು ಸರ್ವೆ ವಿಭಾಗದ ಅಧಿಕಾರಿಗಳನ್ನು ಕರೆಸಿ ಶಾಲೆಯ ಜಾಗವನ್ನು ಸರ್ವೆಮಾಡುವ ಸಂದರ್ಭದಲ್ಲಿ .ವಿ.ಪಿ
ಶಶಿಧರ್ಪು, ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆದಂ, ಕಾಂಗ್ರೆಸ್ ಮುಖಂಡ ಶಿವಶಂಕರ್ , ಎಸ್.ಚಂದನ್ , ರೋಷನ್ , ಸುಜಯ್, ಕಿರಣ್ ಹಾಗೂ ಸ್ಥಳೀಯ ಪ್ರಮುಖರು ಸೇರಿ ಯಾವುದೇ ಕಾರಣಕ್ಕೂ ಸರ್ವೆ ಮಾಡಲು ಮತ್ತು ಶಾಲೆಯ ಜಾಗವನ್ನು ಯಾರಿಗೂ ಅತಿಕ್ರಮಣ ಮಾಡಲು ಬಿಡುವುದಿಲ್ಲ ಎಂದು ತಡೆದರು. ಈ ಸಂದರ್ಭದಲ್ಲಿ ಕೆಲ ಕಾಲ ಅಧಿಕಾರಿಗಳ ಜೊತೆಯಲ್ಲಿ ಮಾತಿನ ಚಕಮಕಿ ನಡೆಯಿತು .ನಂತರ ಹೋರಾಟಗಾರರು ಅಧಿಕಾರಿಗಳಿಗೆ ಅಕ್ಷೇಪಣಾ ಪತ್ರ ಬರೆದು ಸರ್ವೆಯನ್ನು ನಡೆಸದಂತೆ ಕೋರಿದರು ಇದರ ಅನ್ವಯ ಅಧಿಕಾರಿಗಳು ಹಿಂತಿರುಗಿದರು .ಈ ಸಂದರ್ಭದಲ್ಲಿ ಹಳೆಯ ವಿಧ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಮಾತನಾಡಿ ಮಡಿಕೇರಿ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಶಾಸಕರ ಅನುದಾನದಲ್ಲಿ ತಡೆಗೋಡೆ ಹಾಗೂ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಮನವಿ ಸಲ್ಲಿಸುವುದಾಗಿ ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್. ಶಾಲೆಯ ಮುಖ್ಯ ಉಪಾಧ್ಯಾಯರು ಹಾಗೂ ಶಿಕ್ಷಕರು ಇದ್ದರು.
Back to top button
error: Content is protected !!