ಆರೋಗ್ಯ

ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಪೋಷಣ್ ಅಭಿಯಾನ

ಕುಶಾಲನಗರ, ಸೆ 10: ದೇಶದಲ್ಲಿ ಅಪೌಷ್ಟಿಕತೆ ತಡೆಯುವುದು ಮತ್ತು ಕಡಿಮೆ ತೂಕದ ಶಿಶುಗಳ ಜನನ ಮಟ್ಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಒತ್ತು ನೀಡಬೇಕೆಂದು ಭಾಸ್ಕರ್ ನಾಯಕ್ ಒತ್ತಾಯ

ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಚಿಕ್ಕತೂರು ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಿದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ಉದ್ಘಾಟನೆ ಮಾಡಿದರು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಸ್ಕರ ನಾಯಕ್ ರವರು ಸರ್ಕಾರಗಳು ಕೇವಲ ರಸ್ತೆ, ಚರಂಡಿ, ಕುಡಿಯುವ ನೀರು, ದೀಪ ನೀಡುವುದಲ್ಲದೆ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಲು ಮುಂದಿನ ಪೀಳಿಗೆಯ ಮಕ್ಕಳು ಆರೋಗ್ಯವಾಗಿ ಇರಬೇಕು ಎಂಬ ದೃಷ್ಟಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ ಗರ್ಭಿಣಿ ಮಹಿಳೆಯರು ಮಾನಸಿಕವಾಗಿಯೂ ಕೂಡ ಆರೋಗ್ಯವಾಗಿ ಇರಬೇಕು ಎಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ ಪೋಷನ್ ಅಭಿಯಾನದಲ್ಲಿ ಸಾಂಪ್ರದಾಯಿಕ ಸ್ವಚ್ಛತೆಯ ಪೌಷ್ಟಿಕ ಆಹಾರವೇ ನಿಜವಾದ ಶಕ್ತಿ ರೋಗನಿರೋಧಕ ಶಕ್ತಿ ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆ ಬಲಪಡಿಸುವುದು ಸುಸ್ಥಿರ ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯಿಂದ ಕಾಯಿಲೆಗಳನ್ನು ದೂರ ಇರಬಹುದು ಎಂದು ತಿಳಿಸಿದರು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿರವರು ಮಾತನಾಡಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ ನೀಡುತ್ತಾ ಸೊನ್ನೆಯಿಂದ ಐದು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು,
ಹದಿಹರೆಯದವರು, ಹಿರಿಯ ನಾಗರಿಕರು, ರಕ್ತ ಹೀನತೆಯಿಂದ ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪಾರ್ವತಮ್ಮ, ಖತೀಜ, ದಿನೇಶ್, ಲೋಕಸಂಘದ ಅಧ್ಯಕ್ಷರಾದ ಸ್ವಾಮಿ ಮತ್ತು ಅಂಗನವಾಡಿ ಆಶಾ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!