ಅವ್ಯವಸ್ಥೆ
ಮಾದಾಪಟ್ಟಣ: ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ತ್ಯಾಜ್ಯ
ಕುಶಾಲನಗರ, ಮೇ 25: ಮಾದಾಪಟ್ಟಣ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿ ಸಮೀಪದ ಮುಖ್ಯ ರಸ್ತೆಯ ಮೇಲೆ ಮಲಿನ ನೀರು ಹರಿಯುತ್ತಿದೆ.
ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ಮಾದಾಪಟ್ಟಣ ಭಾಗಶಃ ಭಾಗ ಪುರಸಭೆ ವ್ಯಾಪ್ತಿಗೆ ಸೇರಿದೆ. ಅದರಂತೆ ಮಾದಾಪಟ್ಟಣ ಗ್ರಾಮಕ್ಕೆ ತೆರಳುವ ಈ ಮುಖ್ಯ ರಸ್ತೆ ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಒಂದು ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜು, ಹಾಸ್ಟೆಲ್ ಇದೆ. ಗ್ರಾಮದಲ್ಲಿ ವಾಸಿಸುವ ನೂರಾರು ಕುಟುಂಬಗಳು ಈ ರಸ್ತೆಯ ಮೂಲಕ ಸಾಗಬೇಕು. ಮಳೆಗಾಲ ಇನ್ನೂ ಪ್ರಾರಂಭವಾಗಲಿಲ್ಲ .ಮಧ್ಯದಲ್ಲಿ ಬರುವ ಅಡ್ಡಮಳೆಗೆನೆ ಈ ರೀತಿಯ ಅವ್ಯವಸ್ಥೆ ಇನ್ನೂ ಮಳೆಗಾಲ ಪ್ರಾರಂಭವಾದರೆ ಏನು ಕಥೆ. ಇದಕ್ಕೆ ಮೂಲ ಕಾರಣ ಈ ರಸ್ತೆಯ ಚರಂಡಿ ತುಂಬಾ ಕೆಸರು ಮಣ್ಷು ತುಂಬಿ ಚರಂಡಿ ಮುಚ್ಚಿಹೋಗಿದೆ ಮೇಲಿನಿಂದ ಬರುವ ಮಳೆಯ ನೀರು ಹಾಗೂ ಮಲಿನ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಗಬ್ಬು ವಾಸನೆಯ ಜೊತೆಯಲ್ಲಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ವಿಧ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.