ಪ್ರಕಟಣೆ

ಸಹಾಯಧನ ದರದಲ್ಲಿ ಜೋಳದ ಬಿತ್ತನೆ ಬೀಜ ಲಭ್ಯ: ಸದುಪಯೋಗಕ್ಕೆ ಮನವಿ

ಕುಶಾಲನಗರ, ಮೇ 25: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿಹದವಾದ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಳೆ ಆಧಾರಿತ ಬೆಳೆಯಾದ ಮೆಕ್ಕೆಜೋಳವನ್ನು ಬಿತ್ತನೆ ಮಾಡಲು ತಾಲ್ಲೂಕು ವ್ಯಾಪ್ತಿಯ ರೈತರು ಈಗಾಗಲೇ ಭೂಮಿಯನ್ನು ಸಿದ್ದತೆ ಮಾಡಿಕೊಂಡು ಬಿತ್ತನೆಗೆ ಸಿದ್ದರಾಗಿದ್ದು, ಈ ಎಲ್ಲಾ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತ ಗೊಂಡಿರುವ ಬಿತ್ತನೆ ಜೋಳದ ಬೀಜಗಳು ಸಹಾಯಧನ ‌ದರದಲ್ಲಿ ದೊರೆಯಲ್ಲಿವೆ, ಇದರ ಸದುಪಯೋಗವನ್ನು ಬಳಕೆ ಮಾಡಿಕೊಳ್ಳಬೇಕೆಂದು ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.
ಈಗಾಗಲೇ ಇಲಾಖೆಯ ವತಿಯಿಂದ ಆಯಾ ತಾಲ್ಲೂಕು, ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಜೋಳದ ಹೈಬ್ರೀಡ್ ತಳಿಗಳಾದ ಸಿ, ಪಿ, ಸೀಡ್ಸ್, ಗಂಗಾ ಕಾವೇರಿ ಎಂಬ ತಳಿಗಳು ದಾಸ್ತಾನು ಇದ್ದು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಭ್ಯವಿರುತ್ತವೆ.
ಕೃಷಿ ಇಲಾಖೆಯ ನಿಯಮಾನುಸಾರ ಸಾಮಾನ್ಯ ವರ್ಗದವರಿಗೆ ಶೇಕಡಾ50, ರಷ್ಟು ರಿಯಾಯಿತಿ, ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ಶೇಕಡಾ 75 ರಷ್ಟು ರಿಯಾಯಿತಿ ದರದಲ್ಲಿ ದೊರಕಲಿದೆ. ತಾಲ್ಲೂಕು ವ್ಯಾಪ್ತಿಯ ರೈತರು ಸಂಬಂಧಿಸಿದ ಜಮೀನಿನ ದಾಖಲೆ, ಮತ್ತು ಆಧಾರ ಕಾರ್ಡ್ ನ ಜೆರಾಕ್ಸ್ ನೀಡಿ ,ರಿಯಾಯಿತಿ ದರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಅಲ್ಲದೆ ಈ ವ್ಯಾಪ್ತಿಯ ರೈತರ ಜಮೀನಿನ ಮಣ್ಣಿನ ಅನುಗುಣವಾಗಿ ಬೇಡಿಕೆಯ ಅನುಸಾರವಾಗಿ ರಸಗೊಬ್ಬರಗಳ ದಾಸ್ತಾನು ಸಹ ಅಯಾ ಗ್ರಾಮಗಳ ಸಹಕಾರ ಸಂಘಗಳಲ್ಲಿ ಇದೆ , ರೈತರು ಮುಂದಿನ ದಿನಗಳಲ್ಲಿ ಭತ್ತದ ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಲು ಮುನ್ನ ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಮಾಡಿಕೊಳ್ಳುವಂತೆ, ಮತ್ತು ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ನವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!