ಕುಶಾಲನಗರ, ಮೇ 05: ಜೆಡಿಎಸ್ ಪಕ್ಷದ ಕುಶಾಲನಗರ ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಂ.ಚಂದ್ರು ನೇಮಕಗೊಂಡಿದ್ದಾರೆ.
ಜನಸ್ನೇಹಿ ಯೋಜನೆಗಳ ಸರದಾರ ಎಚ್.ಡಿ.ಕೆ ಅವರ ಜನಪರ ಕಾರ್ಯಕ್ರಮಗಳಿಗೆ ಮನಸೋತು ಜೆಡಿಎಸ್ ಬೆಂಬಲಿಸಿದ ತನ್ನ ಸೇವೆ ಗುರುತಿಸಿ ದೊಡ್ಡ ಜವಾಬ್ದಾರಿ ವಹಿಸಲಾಗಿದೆ ಎಂದು ಅಧಿಕಾರ ಸ್ವೀಕರಿಸಿದ ಚಂದ್ರು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮಡಿಕೇರಿ ಕ್ಷೇತ್ರದಲ್ಲಿ ನಾಪಂಡಮುತ್ತಪ್ಪ ಅವರ ಪರವಾಗಿ ಮತದಾರರ ಒಲವಿದೆ. ನಗರ ವ್ಯಾಪ್ತಿಯಲ್ಲಿ ಹಲವು ಮಂದಿ ಸ್ವಯಂ ಪ್ರೇರಿತರಾಗಿ ಜೆಡಿಎಸ್ ಸೇರುತ್ತಿದ್ದಾರೆ. ನಾಪಂಡಮುತ್ತಪ್ಪ ಅವರ ಗೆಲುವಿಗೆ ಎಲ್ಲಾ ವಾರ್ಡ್ ಗಳಲ್ಲಿ ಕಾರ್ಯಕರ್ತರ ಪಡೆ ಶ್ರಮವಹಿಸಿ ಸಂಘಟನೆಯಲ್ಲಿಜಲ ನಿರತರಾಗಿದ್ದಾರೆ ಎಂದರು.
ಎಲ್ಲಾ ವರ್ಗದವರು ಕೂಡ ಜೆಡಿಎಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಚಂದ್ರು ತಿಳಿಸಿದರು.
ಹಿರಿಯ ಮುಖಂಡರಾದ ಶಬ್ಬೀರ್ ಅಹಮ್ಮದ್ ಹಾಗೂ ಎಚ್.ಡಿ.ಚಂದ್ರು ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ
ದಲಿತರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಶೇಕಡವಾರು ಮೀಸಲಾತಿ ಹೆಚ್ಚಿಸಿ ಅನುಕೂಲ ಕಲ್ಪಿಸಿದ್ದರು. ಇದು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಾಗಿರಲಿಲ್ಲ. ಇಂತಹ ಜನಪರ, ದೂರದೃಷ್ಟಿಯ ಯೋಜನೆಗಳಿಗೆ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.
ಈ ಸಂದರ್ಭ ನಗರ ಘಟಕದ ಉಪಾಧ್ಯಕ್ಷ ಜಮೀರ್ ಎಂ.ಎಸ್,
ನಗರ ಯೂತ್ ಘಟಕ ಅಧ್ಯಕ್ಷ ವಿನಾಯಕ, ತಾಲೂಕು ವಕ್ತಾರ ಜಕ್ರಿಯ, ಪ್ರಮುಖರಾದ ಎಚ್.ಟಿ.ವಸಂತ, ಗಿರೀಶ್, ಎಚ್.ಎಸ್.ವೆಂಕಟೇಶ್, ಇಬ್ರಾಹಿಂ, ವೆಂಕಟೇಶ್ ಎಚ್.ಆರ್, ವಿನೋದ್, ಮುಜಾಹಿದ್, ಮಹದೇವ್ ಕೆ.ಡಿ ಇದ್ದರು.
Back to top button
error: Content is protected !!