ಕುಶಾಲನಗರ, ಏ 07: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿ ಮಡಿಕೇರಿ ಕ್ಷೇತ್ರದಲ್ಲಿ ಗೆಲುವಿಗೆ ಅಸಮಾಧಾನ, ಬೇಸರ ಬದಿಗೊತ್ತಿ ಶ್ರಮವಹಿಸಲಾಗುವುದು ಎಂದು ಕ್ಷೇತ್ರದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಸ್.ಚಂದ್ರಮೌಳಿ ತಿಳಿಸಿದರು.
ಕುಶಾಲನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾ.ಮಂಥರ್ ಗೌಡ ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳೊಂದಿಗೆ ಒಂದು ಪ್ರಭಲ ಸಮುದಾಯದ ಮತಗಳು ಸೇರಿದಂತೆ ಸಂಪನ್ಮೂಲ ಕ್ರೋಡೀಕರಣಕ್ಕೆ ಶಕ್ತರಾಗಿರುವ ಮಂಥರ್ ಗೌಡ ಅವರ ಆಯ್ಕೆ ನ್ಯಾಯ ಸಮ್ಮತವಾಗಿದೆ. ಈ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಅವರು ಸಾಧನೆ ಕೂಡ ಇಲ್ಲಿ ಆಯ್ಕೆಗೆ ಪ್ರಮುಖ ಕಾರಣವಾಗಿದೆ ಎಂದರು. ತಮಗೆ ಪಕ್ಷದ ಗೆಲುವು ಮುಖ್ಯ.
ತಾನು ಈಗಾಗಲೆ ಕಾರ್ಯಾಂಗ, ನ್ಯಾಯಾಂಗದಲ್ಲಿ ತೊಡಗಿಸಿಕೊಂಡಿದ್ದು ಶಾಸಕಾಂಗದ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿರೀಕ್ಷೆ ಹೊಂದಿದ್ದೆ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿ ತಾನೂ ಕೂಡ ಮಂಥರ್ ಅವರನ್ನು ಬೆಂಬಲಿಸಿದ್ದು, ಮಂಥರ್ ಗೌಡ ಕೇವಲ ಸಾಂಕೇತಿಕ. ಕಾಂಗ್ರೆಸ್ ಪಕ್ಷದ ಗೆಲುವು ಇಲ್ಲಿ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸಿಗರು ಭಿನ್ನಾಭಿಪ್ರಾಯ ಬಗಿಗೊತ್ತಿ ಈಗಿರುವ ಶಾಸಕರ ವಿರುದ್ದ ಅಲೆಯನ್ನು ಬಂಡವಾಳವಾಗಿಸಿಕೊಂಡು ಕಾರ್ಯನಿರ್ವಹಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕಿದೆ.
ತನಗೆ ದೊರೆತ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನೈಪುಣ್ಯತೆ, ಸಂಘಟನಾ ಕಲೆಗಳು ಮಂಥರ್ ಗೌಡ ಅವರಿಗಿದೆ ಎಂದರು.
ಈ ಸಂದರ್ಭ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ್, ಡಿಸಿಸಿ ಸದಸ್ಯ ಶರತ್ ಶೇಖರ್, ಪ್ರಮುಖರಾದ ಉದಯಕುಮಾರ್, ರಂಗಸ್ವಾಮಿ, ಅಶೋಕ್ ಇದ್ದರು.
Back to top button
error: Content is protected !!