ಕುಶಾಲನಗರ, ಏ 07: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವದ ಅಂಗವಾಗಿ ಶುಕ್ರವಾರ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.
ಮಹಾಗಣಪತಿ ಹೋಮ, ವಿಶೇಷ ಅಭಿಷೇಕಗಳು, ಶ್ರೀರಾಮತಾರಕ ಹೋಮ, ಗಾಯತ್ರಿ, ಮೃತ್ಯುಂಜಯ ಹೋಮಗಳು ನಡೆದವು. ನಂತರ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಪಟ್ಟಾಭಿರಾಮನ ಭವ್ಯ ಮರವಣಿಗೆ ನಡೆಯಿತು.
ರಾಮೋತ್ಸವ ಅಂಗವಾಗಿ 10 ದಿನಗಳ ಕಾಲ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ರಾಮನವಮಿ, ಸೀತಾಕಲ್ಯಾಣ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಥಬೀದಿಯಲ್ಲಿರುವ ಸಂಘದ ಕಛೇರಿಯಲ್ಲಿ ವೇ.ಬ್ರ.ಕೆ.ಕೆ.ಸುಬ್ಬುರಾಮು ಅವರ ನೇತೃತ್ವದಲ್ಲಿ ಪ್ರತಿದಿನ ಮಧ್ಯಾಹ್ನ, ಸಂಜೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯುತ್ತಿದೆ.
ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ಸಂದರ್ಭ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್, ಖಜಾಂಚಿ ಶ್ರೀದೇವಿ ವೆಂಕಟರಮಣ ರಾವ್, ಕಾರ್ಯದರ್ಶಿ ಅನಿಲ್ ಶೇಷಾದ್ರಿ, ರಾಮೋತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಶಶಿಧರ್, ಕಾರ್ಯದರ್ಶಿ ಸತೀಶ್, ಖಜಾಂಚಿ ಕೆ.ವಿ.ಉದಯ, ಪ್ರಮುಖರಾದ ಎಂ.ವಿ.ನಾರಾಯಣ, ಡಾ.ರಾಧಾಕೃಷ್ಣ, ರಮಾ ವಿಜಯೇಂದ್ರ, ಶರ್ಮಿಳ ಮಂಜುನಾಥ್, ದೀಪಿಕ ರಾಘವೇಂದ್ರ, ಸೀತಾಲಕ್ಷ್ಮಿ, ವಿಜಯಶ್ರೀ, ರಜನಿ ಪ್ರದೀಪ್ ಮತ್ತಿತರರು ಇದ್ದರು.
Back to top button
error: Content is protected !!