ಮಳೆ

ಮಾದಾಪಟ್ಟಣ ಬಳಿ‌ ಕಾವೇರಿ ನದಿಗೆ ಅಡ್ಡಲಾಗಿ ಸ್ಯಾಂಡ್ ಬಂಡ್ ಅಳವಡಿಕೆ

ಕುಶಾಲನಗರ, ಏ 07: ಬಿಸಿಲಿನ ಝಳಕ್ಕೆ ತತ್ತರಿಸಿರುವ ಕಾವೇರಿಯಲ್ಲಿ ನೀರಿನ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಹಲವು ಕಡೆಗಳಲ್ಲಿ ಕಾವೇರಿ ಒಡಲ ದರ್ಶನವಾಗುತ್ತಿದೆ‌. ಮಳೆಯ ಅಭಾವ ತೀವ್ರವಾಗಿ‌ ಕಾಡುತ್ತಿದ್ದು ಕುಡಿವ ನೀರಿನ ಅಭಾವ ತಪ್ಪಿಸಲು ನದಿ ನೀರಿನ ಹರಿವಿಗೆ ತಡೆಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾದಾಪಟ್ಟಣ ಭಾಗದಲ್ಲಿ ನೀರೆತ್ತುವ ಯಂತ್ರಾಗಾರದ ಬಳಿ ನದಿಗೆ ಅಡ್ಡಲಾಗಿ ಸ್ಯಾಂಡ್ ಬಂಡ್ ಅಳವಡಿಕೆ ಮಾಡಲಾಗಿದೆ. ಕುಡಿವ ನೀರಿನ ಪೂರೈಕೆ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆಯಾಗಿ ಕುಶಾಲನಗರ ಪುರಸಭೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಮರಳು ಮೂಟೆಗಳನ್ನು ಹಾಕಿ ನೀರು ಸಂಗ್ರಹಿಸಿ ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!