ಕಾರ್ಯಕ್ರಮ

ಕುಶಾಲನಗರದಲ್ಲಿ‌ ನಡೆದ ಬಿಜೆಪಿ ಎಸ್.ಸಿ.ಮೋರ್ಚಾ ಸಮಾವೇಶ

ಕುಶಾಲನಗರ, ಮಾ 16: ಭಾರತೀಯ ಜನತಾ ಪಾರ್ಟಿಯ ಎಸ್.ಸಿ.ಮೋರ್ಚಾ ಸಮಾವೇಶ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಕೊಡಗಿನಲ್ಲಿ‌ 600 ಕೋಟಿ ರೂಗಳನ್ನು ಎಸ್.ಸಿ.ಜನಾಂಗದ ಅಭಿವೃದ್ಧಿಗೆ ಬಳಸಲಾಗಿದೆ. ಈ ಹಿಂದಿನ ಕಾಂಗ್ರೆಸ್ ಸರಕಾರದ ಜನಪ್ರತಿನಿಧಿಗಳು ಎಸ್.ಸಿ, ಎಸ್.ಟಿ.ಜನಾಂಗವನ್ನು ಕಡೆಗಣಿಸಿದ್ದರು ಎಂದು ಆರೋಪಿಸಿದ ಅವರು, ಬಿಜೆಪಿಯ ಅಭಿವೃದ್ಧಿ ಯೋಜನೆಗಳಿಗೂ ಅಡ್ಡಗಾಲು ಹಾಕುವ ಮನಸ್ಥಿತಿ ಕಾಂಗ್ರೆಸ್ ನಾಯಕರದ್ದು ಎಂದು ಆಕ್ರೋಷ ವ್ಯಕ್ತಪಡಿಸಿದರು. ಎಲ್ಲಾ ಜನಾಂಗದವರಿಗೆ ಶಿಕ್ಷಣ, ವಸತಿ ವ್ಯವಸ್ಥೆಗೆ ಬಿಜೆಪಿ ಪ್ರಮುಖ ಆದ್ಯತೆ ನೀಡುತ್ತಿದೆ ಎಂದರು.
ಅಂಬೇಡ್ಕರ್ ಬದುಕಿದ್ದಾಗ ಚುನಾವಣೆಯಲ್ಲಿ ಸೋಲಿಸಿದ್ದು ಅಲ್ಲದೆ ಅವರ ನಿಧನ ಸಂದರ್ಭ ಕೂಡ ಸೂಕ್ತ ಗೌರವ ನೀಡದೆ ಅಪಮಾನ ಮಾಡಲಾಗಿದೆ. ಬಿಜೆಪಿ ಸರಕಾರ ಬಂದ ಬಳಿಕ‌ ಅಂಬೇಡ್ಕರ್ ಸಮಾಧಿ, ಪುತ್ಥಳಿ ನಿರ್ಮಾಣ ಮಾಡಲಾಯಿತು ಎಂದು ತಿಳಿಸಿದರು.
ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶದ ಸ್ವತ್ತು. ಅಂತಹ ಮಹಾನ ನಾಯಕನಿಗೆ ದ್ರೋಹ ಬಗೆದ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರಿಗೆ ಭಾರತ ರತ್ನ ಘೋಷಿಸಿದ ಕೀರ್ತಿ ನಮ್ಮದು. ಬಿಜೆಪಿ ಎಲ್ಲಾ ವರ್ಗದ ಪಕ್ಷ, ಸರ್ವವ್ಯಾಪಿ ಎಂದರು. ಪರಿಶಿಷ್ಠರನ್ನು ಕೇವಲ‌ ವೋಟ್ ಬ್ಯಾಂಕ್ ಗಾಗಿ ಬಳಸಿ ಮುಖ್ಯವಾಹಿನಿಗೆ ತರದೆ ಕತ್ತಲಲ್ಲಿಟ್ಟ ಕೀರ್ತಿ‌ ಕಾಂಗ್ರೆಸ್ ಗೆ ಸಲ್ಲಬೇಕು ಎಂದರು.
ಎಂಎಲ್ಸಿ, ರಾಜ್ಯ ವಕ್ತಾರೆ ತೇಜಸ್ವಿನಿ ರಮೇಶ್ ಮಾತನಾಡಿ, ಕೊಡಗಿಗೆ ಕಾಂಗ್ರೆಸ್ ಪಕ್ಷದ ಸೇವೆ, ಕೊಡುಗೆ ಏನೇನು ಇಲ್ಲ. ಯಾವ ಆಧಾರದ ಮೇಲೆ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕಿದೆ ಎಂದು ಪ್ರಶ್ನಿಸಿದ ಅವರು, ಕೊಡಗಿನ ಇಬ್ಬರು ಶಾಸಕರು ಅಭಿವೃದ್ದಿಗೆ 4 ಸಾವಿರ ಕೋಟಿ ಅನುದಾನ ತಂದಿದ್ದಾರೆ ಎಂದರು. ಕೊಡಗಿನ ಅಭಿವೃದ್ದಿಗೆ ಒಂದೇ ನಾಣ್ಯದ ಎರಡು ಮುಖದಂತೆ ಶಾಸಕರುಗಳು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದರು.
ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಎಸ್ ಸಿ ಘಟಕದ ವಿವಿಧ ಮೋರ್ಚಾ ಪ್ರಮುಖರಾದ ಪರಮಾನಂದ್, ದಿವಾಕರಬಾಬು, ಮಹೇಶ್, ಸೋಮವಾರಪೇಟೆ ಮಂಡಲ‌ ಅಧ್ಯಕ್ಷ ಮನುಕುಮಾರ್ ರೈ, ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಪ್ರಮುಖರಾದ ಕುಮಾರಪ್ಪ, ಎಚ್.ಎಂ.ರವಿ, ಎಚ್.ಕೆ.ಮಾದಪ್ಪ, ಪಿ.ಕೆ.ಚಂದ್ರು, ಎಸ್.ಸಿ.ಸತೀಶ್, ದುಶ್ಯಂತ್, ಪ್ರವೀಣ್, ಸುಶೀಲಾ, ಜ್ಯೋತಿ, ಮಂಜುಳಾ ಮತ್ತಿತರ ಪ್ರಮುಖರು ಇದ್ದರು.
ಇದೇ ಸಂದರ್ಭ 70 ಕ್ಕೂ ಅಧಿಕ ಚುನಾಯಿತ ಎಸ್.ಸಿ. ಜನಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರ‌ಮಕ್ಕೂ ಮುನ್ನ ಕುಶಾಲನಗರ ಗಣಪತಿ ದೇವಾಲಯದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!