ಪ್ರಕಟಣೆ
ಸಂಗೀತ ವಿದ್ವಾನ್ ಎಂ. ನಾರಾಯಣರಿಗೆ ಕದ್ರಿ ಸಂಗೀತಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ.
ಕುಶಾಲನಗರ, ಡಿ 04: ಡಾ|| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ) ಆಶ್ರಯದಲ್ಲಿ ಇದೇ ಡಿಸೆಂಬರ್ 6 ರಂದು ಪದ್ಮಶ್ರೀ ಡಾ|| ಕದ್ರಿ ಗೋಪಾಲನಾಥ್ ಅವರ 73 ನೇ ಜನುಮ ಜಯಂತಿಯ ಪ್ರಯುಕ್ತ ಕದ್ರಿ ಸಂಗೀತ ಸೌರಭ 2022 ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಕದ್ರಿ ಸಂಗೀತ ಸೌರಭ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಶ್ರೀ ಎಂ ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
ಮೂಡಬಿದ್ರೆಯಲ್ಲಿ ಜನಿಸಿದ ಶ್ರೀ ಎಂ ನಾರಾಯಣ ಅವರು ಒಬ್ಬ ಅಪ್ರತಿಮ ಕಲಾವಿದರು. ಪ್ರಸ್ತುತ ಸುರತ್ಕಲ್ ನ ಶ್ರೀಗಣೇಶ್ ಸಂಗೀತ ಮತ್ತು ನೃತ್ಯ ಕಲಾಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಸಂಗೀತ ಪ್ರಾದ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನ ನೀಡುತ್ತಿದ್ದಾರೆ.
ಓರ್ವ ಖ್ಯಾತ ಸಂಗೀತ ರಚನಕಾರರಾಗಿರುವ ಇವರು ನಾರಾಯಣದಾಸ ನಾಮಾಂಕಿತದಲ್ಲಿ ಈವರೆಗೆ ವಿವಿಧ ರಾಗ ತಾಳಗಳಲ್ಲಿ 25 ಜತಿ ಸ್ವರಗಳು, 75 ತಾಣ ವರ್ಣಗಳು, 4 ಸ್ವರ ಜತಿಗಳು, 200 ಕೃತಿಗಳು ಹಾಗು 15 ತಿಲ್ಲಾನಗಳನ್ನು ಕನ್ನಡ ತೆಲುಗು ಹಾಗೂ ಸಂಸ್ಕೃತದಲ್ಲಿ ರಚಿಸಿದ್ದಾರೆ.
ಅಂತೆಯೇ 72 ಮೇಳಕರ್ತ ರಾಗಗಳಲ್ಲೂ ಕೂಡ ಕೃತಿ ರಚನೆ ಮಾಡಿರುವ ಕರ್ನಾಟಕದ ಕೆಲವೇ ಕೆಲವು ರಚನಕಾರರಲ್ಲಿ ಇವರು ಒಬ್ಬರು.
ಶ್ರೀಯುತರು ಶ್ರೀಮಹಾಗಣಪತಿಯ ಮೇಲೆ 47 ಕೃತಿಗಳ ರಚನೆ ಮಾಡಿದ್ದಾರೆ.
ಶ್ರೀಯುತರ ಅಪರಿಮಿತ ಸಾಧನೆಯನ್ನು ಗುರುತಿಸಿ ಡಾ| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ಕದ್ರಿ ಸಂಗೀತ ಸೌರಭ 2022 ರ ಜೀವಮಾನ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು 50,000/ನಗದು ಹಾಗೂ ಬೆಳ್ಳಿಯ ಫಲಕ ಹೊಂದಿದೆ.
ಡಿಸೆಂಬರ್ 6 2022 ರಂದು ಸಂಜೆ 530 ಕ್ಕೆ ಮಂಗಳೂರು ಉರ್ವ ಸ್ಟೋರ್ ಹತ್ತಿರ ಇರುವ
ಡಾ || ಬಿ ಆರ್ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.