ಕಾರ್ಯಕ್ರಮ

ಕುಶಾಲನಗರದ ಯೂನಿಯನ್ ಬ್ಯಾಂಕಿನಲ್ಲಿ ಕನ್ನಡ ರಾಜ್ಯೋತ್ಸವ

ಕುಶಾಲನಗರ, ನ – 30 :  ದೇಶದ ಹಲವು ರಾಜ್ಯಗಳ ಬಹಳಷ್ಟು ಮಂದಿಗೆ ಉದ್ಯೋಗ ನೀಡಿರುವ ಕರ್ನಾಟಕ ನಮ್ಮೆಲ್ಲರ ಪಾಲಿಗೆ ಕಾಮಧೇನು ಎಂದು ಇಲ್ಲಿನ ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕಿ ರಾಜಶ್ರೀ ರಾಮಚಂದ್ರನ್ ಹೇಳಿದರು.
ಬ್ಯಾಂಕಿನ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಾಢ ದೇವತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬದುಕು ಕಟ್ಟಿರುವ ಅನ್ಯ ಭಾಷಿಗರು ಇಲ್ಲಿನ ನೆಲ – ಜಲ ಹಾಗು ಕನ್ನಡ ಭಾಷೆಯನ್ನು ಕಲಿತು ಇಲ್ಲಿನ ಜನರೊಂದಿಗೆ ಸೌಜನ್ಯದಿಂದ ಬದುಕಬೇಕಿದೆ ಎಂದು ರಾಜಶ್ರೀ ಕರೆಕೊಟ್ಟರು.
ಬ್ಯಾಂಕಿನ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ರಾಷ್ಟ್ರೀಕೃತ ಬ್ಯಾಂಕಾದ ಯೂನಿಯನ್ ಬ್ಯಾಂಕು ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ.
ಕನ್ನಡ ನೆಲದಲ್ಲಿ ಉದ್ಯೋಗ ಕಂಡುಕೊಂಡಿರುವ ಅನ್ಯ ಭಾಷಿಗ ಯುವಕರು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿತು, ಇಲ್ಲಿನ ಜನರೊಂದಿಗೆ ಕನ್ಜಡದಲ್ಲೇ ವ್ಯವಹರಿಸಬೇಕು. ನಾಡು – ನುಡಿ, ಇಲ್ಲಿನ ಆಚಾರ – ವಿಚಾರಗಳನ್ನು ಗೌರವಿಸಬೇಕಿದೆ ಎಂದು ಅವರು ಕರೆಕೊಟ್ಟರು.
ಕಾರ್ಗಿಲ್ ಯುದ್ಧ ಸಮರದ ವೀರ ಯೋಧ ( ಮಾಜಿ ) ಯೂನಿಯನ್ ಬ್ಯಾಂಕಿನ ಸಿಬ್ಬಂದಿಯೂ ಆಗಿರುವ ನಭಿ ಅಹಮದ್ ಮಾತನಾಡಿ, ರಾಜ್ಯೋತ್ಸವ ಕೇವಲ ನವೆಂಬರ್ ಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು.‌ ಕರ್ನಾಟಕದ ಎಲ್ಲಾ ಬ್ಯಾಂಕುಗಳಲ್ಲಿ ಅಲ್ಲಿನ ಸಿಬ್ಬಂದಿಗಳು ಕನ್ನಡದ ಹಬ್ಬವನ್ನು ಆಚರಿಸುವಂತಾಗಬೇಕು ಎಂದು ಕರೆಕೊಟ್ಟರು.
ಮುಖ್ಯ ಅತಿಥಿಯಾಗಿ ಕುಶಾಲನಗರದ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹಿರ್, ಬ್ಯಾಂಕಿನ ಸಿಬ್ವಂದಿಗಳಾದ ಪ್ರಕಾಶ್, ಅನಿಲ್, ಪ್ರಸನ್ನ, ಸ್ವಾಗತ್, ಸುಧಾಕರ್, ಲಕ್ಷ್ಮಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!