ಧಾರ್ಮಿಕ
ತೊರೆನೂರಿನಲ್ಲಿ ಕಾರ್ತಿಕ ಮಾಸದ ದೀಪೋತ್ಸವ.
ಕುಶಾಲನಗರ, ನ 24: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗದ್ದೆಹೊಸಹಳ್ಳ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ವಿಶೇಷ ಪೂಜಾ ದೀಪೋತ್ಸವ ಕಾರ್ಯಕ್ರಮವು ಶ್ರಧ್ಧಾಭಕ್ತಿಯಿಂದ ನೆರವೇರಿತು.
ಶನೇಶ್ವರ ದೇವರಿಗೆ ವಿಶೇಷ ಪೂಜೆ ಹೋಮ ಹವನಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಆವರಣದಲ್ಲಿ ನಡೆದವು.
ಕಾರ್ತಿಕ ಮಾಸದ ವಿಶೇಷ ದೀಪೋತ್ಸವಕ್ಕೆ ಹೆಬ್ಬಾಲೆ ಡಿ ಸಿ ಸಿ ಬ್ಯಾಂಕ್ ನ ವ್ಯವಸ್ಥಾಪಕ ತುಂಗರಾಜ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಹೇಶ್, ಪ್ರಮುಖರಾದ ವಿ. ಟಿ .ದೇವರಾಜ್ , ಸುರೇಶ್, ಚಂದ್ರಶೇಖರ್, ಪ್ರಕಾಶ್, ರಮೇಶ್,
ದೇವಾಲಯ ಸಮಿತಿಯ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಸಮಿತಿಯ ಸದಸ್ಯರು ಇದ್ದರು.
ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.