ಕುಶಾಲನಗರ, ನ 24: ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಹಂದಿಮರಿಗಳ ವಿತರಣೆ ಮಾಡಲಾಯಿತು.
ಕುಶಾಲನಗರ ಮತ್ತು ಸೋಮವಾರ ತಾಲೂಕು ವ್ಯಾಪ್ತಿಯ
ವಾಲ್ನೂರು, ಕೂಡಿಗೆ, ನಂಜರಾಯಪಟ್ಟಣ, ನಾಕೂರು ಶಿರಂಗಾಲ, ಐಗೂರು ಗ್ರಾಪಂ ವ್ಯಾಪ್ತಿಯ 13 ಮಂದಿ ಫಲಾನುಭವಿಗಳಿಗೆ ತಲಾ 4 ಹಂದಿಮರಿಗಳನ್ನು ಕುಶಾಲನಗರದ ಎಪಿಎಂಸಿ ಅವರಣದಲ್ಲಿ ವಿತರಣೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ರೂ 50 ಸಾವಿರ ವೆಚ್ಚದಲ್ಲಿ ಓರ್ವ ಫಲಾನುಭವಿಗಳಿಗೆ ಮರಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್.ಕೆ.ಚಂದ್ರು, ಮೂಲ ಆದಿವಾಸಿ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಅಧ್ಯಕ್ಷ ಜೆ.ಕೆ.ಪ್ರಕಾಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಾದಾಮಿ, ಎಪಿಎಂಸಿ ಕಾರ್ಯದರ್ಶಿ ಕೆ.ಆರ್.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮಧು ಮತ್ತಿತರರು ಇದ್ದರು.
Back to top button
error: Content is protected !!