ಅವ್ಯವಸ್ಥೆ
ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶ
ಕುಶಾಲನಗರ, ನ 23: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ, ಕಲ್ಲುಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಚಿನ್ನನಹಳ್ಳಿ ಮೂಲಕ ಹುಲುಸೆ, 6 ನೇ ಹೊಸಕೋಟೆ, ಕಲ್ಲುಕರೆ, ಹಳೆಕೋಟೆ ವ್ಯಾಪ್ತಿಯಲ್ಲಿ ದಾಂಧಲೆ ನಡೆಸಿ ಬೆಳೆಯಲಾಗಿರುವ ಭತ್ತ ಬೆಳೆಯನ್ನು ತಿಂದು ತುಳಿದು ನಷ್ಟ ಪಡಿಸಿವೆ. ಹುಲುಸೆ ಗ್ರಾಮದ ನಾಗಣ್ಣ, ಸುಬ್ರಾಯ, ರಾಜಣ್ಣ, ಗಿರೀಶ್ ಎಂಬ ರೈತರ ಜಮೀನಿಗೆ ದಾಳಿ ಮಾಡಿವೆ. ಚಿನ್ನನಹಳ್ಳಿಯ ವ್ಯಾಪ್ತಿಯ ಅರಣ್ಯ ಕಂದಕವನ್ನು ಸರಿಪಡಿಸುವಂತೆ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.