ಕ್ರೈಂ

ಜಿಂಕೆ ಚರ್ಮ ಮಾರಾಟ ಯತ್ನ: ಆರೋಪಿ‌ ಬಂಧನ

ಕುಶಾಲನಗರ, ನ 10: ಮಡಿಕೇರಿ ನಗರ ಸುದರ್ಶನ ವೃತ್ತದ ಹತ್ತಿರ ಸಿದ್ದಾಪುರ ಕಡೆಗೆ ಹೋಗುವ ರಸ್ತೆಯ ಬಸ್ ನಿಲ್ದಾಣದ ಬಳಿ ವೆಂಕಟೇಶ್ ನಂಜನಗೂಡು ಎಂಬವರು ಸರ್ಕಾರದ ಪರವಾನಗೆ ಇಲ್ಲದೆ ಅಕ್ರಮವಾಗಿ ಒಂದು ಜಿಂಕೆಯ ಚರ್ಮವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗೆ ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂಧಿಸಿರುವುದಾಗಿದೆ. ಕಾರ್ಯಾಚರಣೆಯಲ್ಲಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ  ಕೆ.ವಿ ಶರತ್‌ಚಂದ್ರ ರವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷರಾದ  ಕೆ.ಬಿ ವಿಶ್ವನಾಥ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ  ಸಿ.ಯು ಸವಿ ಹೆಡ್‌ ಕಾನ್ಸ್‌ಟೇಬಲ್‌ಗಳಾದ  ಶೇಖರ್, ರಾಜೇಶ್‌, ರಾಘವೇಂದ್ರ ಯೋಗೇಶ್‌, ಮೋಹನ ಮತ್ತು ಕಾನ್ಸ್‌ಟೇಬಲ್‌ಗಳಾದ ಸ್ವಾಮಿ, ಮಂಜುನಾಥ ರವರು ಪಾಲ್ಗೊಂಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!