ಕುಶಾಲನಗರ, ನ 03: ಹುಣಸೂರು ತಾಲೂಕಿನ, ಬಿಳಿಕೆರೆ ಹೋಬಳಿಯ ದೊಂಬಿ ದಾಸರ ಕಾಲೋನಿ( ಕುಪ್ಪೆ ಗೇಟ್) ಗ್ರಾಮದ ವೆಂಕಟೇಶ್ ಬಿನ್ ಲಕ್ಷ್ಮಯ್ಯ, (50 ವರ್ಷ) ಮತ್ತು ಅದೇ ಗ್ರಾಮದ ಸುನಿಲ್, ಸಂಜೀವ್ ಹಾಗೂ ಇತರರಿಗೆ ಗ್ರಾಮದಲ್ಲಿರುವ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿದ್ದು ಅದು ಹುಣಸೂರು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುತ್ತದೆ. ಗುರುವಾರ ಹುಣಸೂರು ನ್ಯಾಯಾಲಯಕ್ಕೆ ಮೇಲ್ಕಂಡ ಇಬ್ಬರು ಹಾಜರಾಗಿ ನ್ಯಾಯಾಲಯದಿಂದ 4:00 ಗಂಟೆ ಸಮಯದಲ್ಲಿ ವೆಂಕಟೇಶ್ ತನ್ನ ಬೈಕಿನಲ್ಲಿ ಸೋಮನಹಳ್ಳಿ ಕೆರೆ ಹತ್ತಿರ ಗ್ರಾಮಕ್ಕೆ ಹೋಗುತ್ತಿದ್ದಾಗ ಸುನಿಲ್ ಮತ್ತು ಇತರರು ವೆಂಕಟೇಶ್ ಮೇಲೆ ಮುಚ್ಚು, ಚಾಕುವಿನಿಂದ ಹಲ್ಲೇ ಮಾಡಿ ತೀವ್ರ ಗಾಯಗೊಳಿಸಿದ್ದು, ವೆಂಕಟೇಶನಿಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿರುತ್ತಾರೆ.
Back to top button
error: Content is protected !!