ಕುಶಾಲನಗರ, ಆ 11: ಇತ್ತೀಚಿಗೆ ತೀವ್ರ ವಿವಾದಕ್ಕೆ ಒಳಗಾಗಿದ್ದ ಸ್ಮಶಾನ ಪ್ರಕರಣಕ್ಕೆ ಜಿಲ್ಲಾಡಳಿತ ಅಂತ್ಯ ಹಾಡಿದೆ. ಪರ ವಿರೋಧಗಳ ನಡುವೆ ಸ್ಮಶಾನ ಜಾಗಕ್ಕೆ ಬೇಲಿ ಅಳವಡಿಸಿ ಬೋರ್ಡ್ ಹಾಕಲಾಯಿತು.
ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮದ ಪ್ರಮುಖ ಸಮಸ್ಯೆ ಸ್ಮಶಾನವಾಗಿತ್ತು. ಗುಡ್ಡೆಹೊಸೂರು ಪಂಚಾಯತಿಯ ಬೋರ್ಡ್ ಸದಸ್ಯರ ದೃಢವಾದ ನಿರ್ಧಾರದಿಂದ ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮಕ್ಕೆ ಸುಣ್ಣದಕೆರೆಯ ಸರಕಾರಿ ಜಾಗದಲ್ಲಿ ಸ್ಮಶಾನ ಜಾಗ ಬೇಲಿ ಹಾಕುವ ಮುಖಾಂತರ ಪಂಚಾಯತಿ ಸುಪಾರ್ದಿಗೆ ಪಡೆಯಲಾಗಿದೆ.
ಗ್ರಾಪಂ ಸದಸ್ಯ ಪ್ರದೀಪ್ ಬಿ. ಎಂ, ನಾರಾಯಣ, ನಿತ್ಯಾನಂದ, ಸುಶೀಲ, ಅಧ್ಯಕ್ಷರಾದ ನಂದಿನಿ ದೇವರಾಜ್ ಇವರ ಶ್ರಮದಿಂದ ಮತ್ತು ಇದಕ್ಕೆ ಬೆನ್ನೆಲುಬಾಗಿ ನಿಂತ ಸದಸ್ಯರಾದ ಪ್ರವೀಣ್ ಕುಶಾಲಪ್ಪ, ಶಿವಪ್ಪ, ಮಂಗಳ, ಲಕ್ಶ್ಮಣ, ಚಿದಾನಂದ, ಉಮಾ, ಮಾದಪ್ಪ (ಪಟ್ಟು ), ಸೌಮ್ಯ, ರಮೇಶ, ಉಪಾಧ್ಯಕ್ಷರಾದ ಯಶೋಧ, ರುಕ್ಮಿಣಿ,ಉಷಾ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ಯಾಂ ಅವರಿಗೆ ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮಸ್ಥರು ಮತ್ತು ಗುಡ್ಡೆಹೊಸೂರು ಹಿತರಕ್ಷಣ ಸಮಿತಿಯ ಅಭಿನಂದನೆ ಸಲ್ಲಿಸಿದೆ.
Back to top button
error: Content is protected !!