ಕುಶಾಲನಗರ, ಆ 12: ಕುಶಾಲನಗರದಲ್ಲಿ ಶುಭಾರಂಭಗೊಳ್ಳಲಿರುವ *LOOKS BEAUTY CARE & SPA* ಲೋಗೋ ಬಿಡುಗೊಳಿಸಲಾಯಿತು.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಮ್ಯಾನ್ಸ್ ಕನ್ವೆಸ್ಟನ್ ಸೆಂಟರ್ ನಲ್ಲಿ ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮ ನಿಯಮಿತದಿಂದ ಆಯೋಜಿಸಲಾಗಿದ್ದ ಹೇರ್ ಕೇರ್ ಸಲೂನ್ ಮತ್ತು ಸ್ಪಾ ಎಕ್ಸ್ ಪೋ ಕಾರ್ಯಕ್ರಮದಲ್ಲಿ ನೂತನ ಸಂಸ್ಥೆಯ ಲೋಗೋ ಅನಾವರಣಗೊಳಿಸಲಾಯಿತು.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ನರೇಶ್ ಕುಮಾರ್ ನೂತನ ಲೋಗೋ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸ್ಪಿನ್ ಸಂಸ್ಥೆಯ ಪ್ರಮುಖರಾದ ನಾಮದೇವ್ ನಾಗರಾಜ್, ಮಹೇಶ್, ದುಬೈ, ಸುನಿಲ್, ಲುಕ್ಸ್ ಬ್ಯೂಟಿ ಕೇರ್ ಮಾಲೀಕ ಆರ್.ಲೋಕೇಶ್ ಇದ್ದರು.
ಎಕ್ಸ್ ಪೋ:
ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್: ದೇಶದಲ್ಲಿಯೇ ಪ್ರಥಮ ಬಾರಿಗೆ ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್ ಸ್ಥಾಪಿಸಲು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸವಿತಾ ಸಮಾಜ ನಿರ್ಧರಿಸಿದೆ ಎಂದಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ನರೇಶ್ ಕುಮಾರ್ ತಿಳಿಸಿದರು.
ವಸತಿ ಸಚಿವ ವಿ.ಸೋಮಣ್ಣ ಎಕ್ಸ್ ಪೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ರಾಜ್ಯ ಸಚಿವ ದರ್ಜೆ ಸ್ಥಾನಮಾನ ಹೊಂದಿರುವ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ನರೇಶ್ ಕುಮಾರ್, ಚಲನಚಿತ್ರ ನಟಿ, ಕೆಎಫ್ ಡಿಸಿ ಅಧ್ಯಕ್ಷೆ ಶ್ರೀಮತಿ ತಾರಾ ಅನುರಾಧಾ ಮತ್ತಿತರರು ಉಪಸ್ಥಿತರಿದ್ದರು.