ಧಾರ್ಮಿಕ

ಕುಶಾಲನಗರದ ಶ್ರೀ ಮಹಾಗಣಪತಿ ದೇವಾಲಯ ಜೀರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆ

ಕುಶಾಲನಗರ, ಫೆ 10: ಕುಶಾಲನಗರ ಹೃದಯ ಭಾಗದಲ್ಲಿ ನೆಲೆಸಿರುವ ಸಹಸ್ರಾರು ಭಕ್ತರ ಆರಾಧ್ಯ ದೇವರಾದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಹಿನ್ನಲೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಸೋಮವಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಸುಮಾರು 6 ಕೋಟಿ ವೆಚ್ಚದಲ್ಲಿ ದೇವಾಲಯ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು ಭೂಮಿಪೂಜೆ‌ ಅಂಗವಾಗಿ ಎರಡು ದಿನಗಳ‌ ಕಾಲ ಪೂಜಾ ಕೈಂಕರ್ಯಗಳು ನೆರವೇರಿದವು.

ಫೆ.9 ರ ಭಾನುವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರಣ, 12 ಕಾಯಿ ಗಣ ಹೋಮ, ಮುಷ್ಠಿ ಕಾಣಿಕೆ ಸಮರ್ಪಣೆ, ನಂತರದಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ರಾತ್ರಿ ಪ್ರೇತಾ ಆಕರ್ಷಣೆ ಉಚ್ಚಾಟನೆ, ಅಘೋರ ಬಲಿ ನಡೆಯಿತು. ಫೆ.10ರ ಸೋಮವಾರ ಶತ ರುದ್ರಾಭಿಷೇಕ, ನವಗ್ರಹ ಸಹಿತ ಭೂವರಾಹ ಸ್ವಾಮಿ ಹೋಮ, ಮಧ್ಯಾಹ್ನ 12 ರಿಂದ 12.30 ರ ಒಳಗೆ ನಡೆಯುವ ವೃಷಭ ಲಗ್ನ ಶುಭಾಂಶದಲ್ಲಿ ಭೂಮಿ ಪೂಜೆ ಕೈಂಕರ್ಯಗಳು ಶೃಂಗೇರಿಯ ಸೀತಾರಾಂ ಉಡುಪ ಮತ್ತು ತಂಡದವರಿಂದ ಪೂಜೆ ನೆರವೇರಿತು.

ದೇವಾಲಯ ಸಮಿತಿ ಪ್ರಮುಖರು ಭೂಮಿಪೂಜೆ‌ ನೆರವೇರಿಸಿದರು.
ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ ಪೂಜೆಯಲ್ಲಿ ಪಾಲ್ಗೊಂಡು ಭೂಮಿ ಪೂಜೆ‌ ನೆರವೇರಿಸಿದರು.

ಈ ಸಂದರ್ಭ ನಡೆದ ಭಕ್ತರ ಸಭೆಯನ್ನು ಉದ್ದೇಶಿಸಿ
ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿದರು. ಅತ್ಯಂತ ಆಕರ್ಷಣೀಯವಾಗಿ ದೇವಾಲಯವನ್ನು ನವೀಕರಣಗೊಳಿಸುವ ಚಿಂತನೆ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಪ್ರವಾಸ ಕೈಗೊಂಡು ಅಧ್ಯಯನ ನಡೆಸಲಿದೆ. ದೇವಾಲಯ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ದೇವಾಲಯ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರಬಾಬು ಮಾತನಾಡಿ ದೇವಾಲಯದ ಇತಿಹಾಸದ ಬಗ್ಗೆ ವಿವರಿಸಿದರು. ಎಲ್ಲರ ಕೋರಿಕೆ ಈಡೇರಿಸುವ 400 ವರ್ಷ ಇತಿಹಾಸ ಹೊಂದಿರುವ ಶ್ರೀ‌ಗಣಪತಿ ದೇವರ‌ ಅನುಗ್ರಹದಿಂದ ಕುಶಾಲನಗರ ಸರ್ವತೋಮುಖವಾಗಿ ಅಭಿವೃದ್ಧಿ ಕಾಣುತ್ತಿದೆ‌. ನಗರದ ಹಲವರು ಉನ್ನತ ಸ್ಥಾನ ಅಲಂಕರಿಸಿರುವುದು ಇದಕ್ಕೆ ಸಾಕ್ಷಿ ಎಂದರು.

ಸಮಿತಿ ಗೌರವಾಧ್ಯಕ್ಷ ವಿ.ಎನ್.ವಸಂತಕುಮಾರ್, ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿದರು.

ಈ ಸಂದರ್ಭ ದೇವಾಲಯ
ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್,  ನಿರ್ದೇಶಕ ಟಿ.ಆರ್.ಶರವಣಕುಮಾರ್, ಚಂದ್ರು, ಎಸ್.ಕೆ.ಸತೀಶ್ ಸೇರಿದಂತೆ ಭಕ್ತಾದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!