ಕುಶಾಲನಗರ, ಡಿ 17: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕುಶಾಲನಗರದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತರಿಗೆ ವಿವಿಧ ಯೋಜನೆಗೆ ಸಂಬಂಧಿಸಿದಂತೆ, ಸಾಲ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಗಾರ ನಡೆಯಿತು.
ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿ ವರ್ಗದವರು ಸಹಕಾರ ಸಂಘದ ರೈತ ಸದಸ್ಯರಿಗೆ ಒದಗಿಸಿದರು.
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸಂಧ್ಯಾಶಿಬಿರ, ಕಿಸಾನ್ ಯೋಜನೆ ಮತ್ತು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯಗಳನ್ನು ಒದಗಿಸುವ ಯೋಜನೆಯ ಹಂತಗಳ ಬಗ್ಗೆ ವಿವರ ನೀಡಿದರು ರೈತರ ಜಮೀನಿನ ಅಧಾರದ ಮೇಲೆ ಸರಕಾರದ ನಿಯಮಾನುಸಾರ ವಿವಿಧ ಬಗೆಯ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಬ್ಯಾಂಕ್ ನ ವಿಭಾಗಿಯ ವ್ಯವಸ್ಥಾಪಕ ಶ್ರೀಜಿತ್ ಮಾಹಿತಿ ಒದಗಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಪಿ. ರಾಜು, ಆರ್. ಕೆ.ನಾಗೇಂದ್ರ ಬಾಬು, ಜಯಶ್ರೀ, ಕುಮಾರ್, ಎಸ್. ಎಸ್ ಕೃಷ್ಣ, ಕೃಷ್ಣೇಗೌಡ, ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಂ. ಪಿ. ಮೀನಾ, ಕುಶಾಲನಗರ ಎಸ್. ಬಿ. ಐ. ಬ್ಯಾಂಕ್ ನ ಮೇನೆಜರ್ ಕೆ. ಪವಿತ್ರ, ಕೃಷಿ ವಿಭಾಗದ ಅಧಿಕಾರಿ ಮಧು, ಮೋಹನ್ ರಾಜ್, ಮುತ್ತಣ್ಣ, ಲೋಹಿತ್,ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಸಂಘ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ರೈತರು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
Back to top button
error: Content is protected !!