ಕ್ರೀಡೆಅವ್ಯವಸ್ಥೆಆರೋಪಕಾರ್ಯಕ್ರಮಪರಿಸರಪ್ರತಿಭಟನೆಮನವಿಸಾಹಿತ್ಯ

ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆ: ಕೂಡುಮಂಗಳೂರು ಬಾಲಕಿ ವಿಶ್ವ ಚಾಂಪಿಯನ್.

ಕುಶಾಲನಗರ ಡಿ. 11: ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗಿನ ಕುಶಾಲನಗರ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಅಮಿತ್, ದಿವ್ಯ ದಂಪತಿಗಳ ಪುತ್ರಿ ಅಜ್ನಾ 10 ವರ್ಷದ ವಯೋಮಿತಿ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಧಾನ ಪಡೆದು  ಚಿನ್ನದ ಪದಕವನ್ನು ಗಳಿಸಿ ವಿಶ್ವ ಚಾಂಪಿಯನ್ ಅಗಿ ಹೊರಹೊಮ್ಮಿದ್ದಾರೆ.
9 ವರ್ಷದ ಅಜ್ನಾ ಸತತ ಪ್ರಯತ್ನದಿಂದಾಗಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಇಂಡೋನೇಷ್ಯಾ ದೇಶದಲ್ಲಿ ನಡೆದ ಕಿರಿಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ 10 ದೇಶಗಳ ಬಾಕ್ಸಿಂಗ್ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಅಜ್ನಾ ಉತ್ತಮ  ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ದಾನ ಪಡೆದು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಅಜ್ನಾ 6 ವರ್ಷಗಳಿಂದಲೂ ಕಿಕ್ ಬಾಕ್ಸಿಂಗ್ ತರಬೇತಿ ಪಡೆಯುತ್ತಾ ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಧಾನ ಪಡೆಯುವುದರ ಜೊತೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿ , ಅಂತರಾಷ್ಟ್ರೀಯ ಮಟ್ಟಕ್ಕೆ ಅಯ್ಕೆಯಾಗಿದ್ದರು.
ಅಜ್ನಾನವರ ತಂದೆ ಅಮಿತ್ ಕಿಕ್ ಬಾಕ್ಸಿಂಗ್ ತರಬೇತಿದಾರರಾಗಿದ್ದು ಅವರೇ ತರಬೇತಿಯನ್ನು ನೀಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!