ಕುಶಾಲನಗರ, ನ 30: ಕೊಡವ ಜನಾಂಗದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡಿದ್ದ ಭಾವಚಿತ್ರಕ್ಕೆ “ಬೆಳಗಾವಿ ಜಿಎಂಜಿ” ಎಂಬ ಫೇಸ್‌ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಯನ್ನು ಪತ್ತೆಗಾಗಿ ರವಿ, ಡಿಎಪಿ, ಸೆನ್ ಪೊಲೀಸ್ ಠಾಣೆ, ರವೀಂದ್ರ, ಪಿಎಸ್‌ಐ, ಸೆನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಖಾತೆದಾರ ಬೆಳಗಾವಿ ಜಿಲ್ಲೆ ಕಿತ್ತೂರು ನಿವಾಸಿ ಗಂಗಧಾರ ಜಮಾದಾರಕನಿ, (22 ವರ್ಷ) ಎಂಬಾತನನ್ನು ಪತ್ತೆಮಾಡಿ ದಿ: 30-11-2024 ರಂದು ಬೆಳಗಾವಿಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
Back to top button
error: Content is protected !!