ಕುಶಾಲನಗರ, ನ 28: ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿರುತ್ತಾರೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುವ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಲಾಟರಿ ಮಾರಾಟವನ್ನು ನಿಷೇದಿಸಲಾಗಿದ್ದು, ಅಕ್ರಮವಾಗಿ ಕೇರಳ ರಾಜ್ಯ ಲಾಟರಿ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರವಿ, ಡಿಎಸ್ಪಿ, ಸೆನ್ ಪೊಲೀಸ್ ಠಾಣೆ, ರವಿ, ಡಿವೈಎಸ್‌ಪಿ, ಸೆನ್ ಪೊಲೀಸ್ ಠಾಣೆ & ಸಿಬ್ಬಂದಿಗಳು ಮತ್ತು ಮೇದಪ್ಪ.ಐ.ಪಿ, ಪಿಐ, ಡಿಸಿಆರ್‌ಬಿ, ಕೊಡಗು ಜಿಲ್ಲೆ & ಸಿಬ್ಬಂದಿಗಳ ತಂಡ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡು ದಿನಾಂಕ: 23-11-2024 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ದೋಹಾ ಕಿಂಗ್ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಸುಂಠಿಕೊಪ್ಪ ನಿವಾಸಿಯಾದ ಆರೋಪಿ ಲತೀಫ್, 40 ವರ್ಷ, ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ರೂ. 40 ಮೌಲ್ಯದ 1800 ಸಂಖ್ಯೆಯ ಲಾಟರಿ ಟಿಕೆಟ್‌ಗಳನ್ನು (ರೂ 72,000) ವಶಪಡಿಸಿಕೊಳ್ಳಲಾಗಿದೆ.
Back to top button
error: Content is protected !!