ಸುದ್ದಿಗೋಷ್ಠಿ

ನ.15 ರಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ

ಕುಶಾಲನಗರ, ನ 13: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ ಕಾರ್ಯಕ್ರಮ ನ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು

ಕುಶಾಲನಗರ ರೋಟರಿ ಸಂಸ್ಥೆಯ ಜಿಲ್ಲಾ ಯೋಜನಾ ಮುಖ್ಯಸ್ಥ ಎಸ್.ಕೆ.ಸತೀಶ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಕೋರಿಕೆ ಮೇರೆಗೆ
ಸೆಂಟ್ರಲ್ ಬ್ಯಾಂಕ್ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ಹೊಸ ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆ ನೀಡಲಾಗಿದೆ.
ಈಗಾಗಲೆ ಆರೋಗ್ಯ ಕೇಂದ್ರದಲ್ಲಿ ನಾಲ್ಕು ಯಂತ್ರಗಳಿದ್ದರೂ ಕೂಡ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ಹೆಚ್ಚಿನ ಯಂತ್ರಗಳ ಅವಶ್ಯಕತೆಯಿತ್ತು. ಇದೀಗ ಈ ಯಂತ್ರಗಳಿಂದ ತೀವ್ರ ಅನುಕೂಲ ಒದಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಶಾಸಕ ಮಂತರ್ ಗೌಡ ಅವರು ಕೂಡ ಅಗತ್ಯ ಸಹಕಾರ ಒದಗಿಸಿದ್ದಾರೆ ಎಂದು ತಿಳಿಸಿದರು.
ನ.15 ರಂದು ಶಾಸಕ ಮಂತರ್ ಗೌಡ ಅವರು ಯಂತ್ರಗಳನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಜೋನಲ್ ಮುಖ್ಯಸ್ಥ ಧಾರಾಸಿಂಗ್ ನಾಯಕ್ ಕೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ರೋಟರಿ ಜಿಲ್ಲೆ 3181 ಗವರ್ನರ್ ವಿಕ್ರಂ ದತ್ತ, ಸಹಾಯಕ ಗವರ್ನರ್ ಡಾ.ಹರಿ ಎ ಶೆಟ್ಟಿ ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.

ರೋಟರಿ ಸಹಾಯಕ ಗವರ್ನರ್ ಡಾ.ಹರಿ ಎ ಶೆಟ್ಟಿ ಮಾತನಾಡಿ, ಡಯಾಲಿಸಿಸ್ ಚಿಕಿತ್ಸೆಗಿಂತ ರೋಗಿಗಳಿಗೆ ಇತರೆ ವೆಚ್ಚಗಳು ತೀವ್ರ ಅನಾನುಕೂಲ ಉಂಟು ಮಾಡಿತ್ತು. ಡಯಾಲಿಸಿಸ್ ಯಂತ್ರಗಳಿಂದ ರೋಗಿಯ ಜೀವನ ಮತ್ತಷ್ಟು ಸುಧಾರಿಸಲಿದ್ದು ಎಲ್ಲರೂ ಇದನ್ನು ಸದುಪಯೋಗೊಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ರೋಟರಿ ಅಧ್ಯಕ್ಷ ಸಿ.ಬಿ.ಹರೀಶ್, ಪ್ರಮುಖರಾದ ಎನ್.ಜಿ.ಪ್ರಕಾಶ್, ಶೋಭಾ ಸತೀಶ್, ಕುಶಾಲನಗರ ಸೆಂಟ್ರಲ್ ಬ್ಯಾಂಕ್ ವ್ಯವಸ್ಥಾಪಕ ರಾಜ್ ಮೋಹನ್ ರೆಡ್ಡಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!