ಕುಶಾಲನಗರ, ಸೆ 10: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಪೌಷ್ಠಿಕ ಆಹಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೌಷ್ಟಿಕ ಆಹಾರದ ಮಹತ್ವ ಹಾಗೂ ಆರೋಗ್ಯ ಜಾಗೃತಿಯ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಮಾಹಿತಿ ನೀಡಿದರು.
ತಾಯಂದಿರು, ಮಕ್ಕಳು ಹಾಗೂ ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ನಾರಿನಾಂಶವುಳ್ಳ ಪೌಷ್ಠಿಕ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ.
ಹಸಿರು ಸೊಪ್ಪು, ಮೊಳಕೆ ಕಾಳು ಹಾಗೂ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹಾಗೆಯೇ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಬಿಸಿನೀರು ಸೇವಿಸಬೇಕು. ಮನೆಯ ಸುತ್ತ ಮುತ್ತ ಸ್ವಚ್ಛಂದ ಪರಿಸರವನ್ನು ಹೊಂದಬೇಕೆಂದು ಕರೆ ಕೊಟ್ಟ ಡಾ.ದೀಪಿಕಾ ಇದೇ ಸಂದರ್ಭ ಕುಟುಂಬ ಕಲ್ಯಾಣ ವಿಧಾನಗಳು ಹಾಗೂ ಡೆಂಗ್ಯೂ, ಮಲೇರಿಯಾ,ಚಿಕೂನ್ ಗೂನ್ಯಾ ಹಾಗೂ ಇಲಿ ಜ್ವರಗಳ ಕುರಿತು ಎಚ್ಚರಿಕೆಯಿಂದ ಇರುವ ಮಾರ್ಗೋಪಾಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕರಾದ ವಿಶ್ವಜ್ಞ ಅಗತ್ಯ ಮಾಹಿತಿ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗಳಾದ ಚಂದ್ರೇಶ್, ಮುಖೇಶ್, ಸುಶ್ರೂಷಕಿ ಶಕೀನಾ, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಗೀತಾ ಹಾಗೂ ಗ್ರಾಮಸ್ಥರು ಇದ್ದರು.
Back to top button
error: Content is protected !!