ಧಾರ್ಮಿಕ

ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಧನ್ಯೋ ಭವ ಕಾರ್ಯಕ್ರಮ

ಕುಶಾಲನಗರ, ಸೆ 10: ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕುಟುಂಬ ಪ್ರಬೋಧನ್ ದೇವಾಲಯಗಳ ಒಕ್ಕೂಟ ಸಮಿತಿ ಹಾಗೂ ಬಾಲ ಸಂಸ್ಕಾರ ಮಂಟಪ ಇವರ ಆಶ್ರಯದಲ್ಲಿ *ಧನ್ಯೋಭವ* ನಮ್ಮ ಕುಟುಂಬ ಒಂದು ಚಿಂತನ ಕಾರ್ಯಕ್ರಮ ನಡೆಯಿತು.

ಅಖಿಲ ಭಾರತ ಕುಟುಂಬ ಪ್ರಬೋಧನ್ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್  ಭಜನ್, ಭೋಜನ್, ಭೂಷಣ್, ಭಾಷಾ, ಭ್ರಮಣ್ ಹಾಗೂ ಭವನ್ ಎನ್ನುವ ಸ್ವದೇಶಿ ಚಿಂತನೆ ಗಳನ್ನು ವಿಶ್ಲೇಷಿಸಿ ಸವಿಸ್ತಾರವಾಗಿ ಅದರ ಭಾವಾರ್ಥವನ್ನು ತಿಳಿಸಿ ನಮ್ಮ ಕುಟುಂಬ ಈ ವ್ಯವಸ್ಥೆಗೆ ಅಣಿಯಾಗಬೇಕೆಂದು ಕರೆಯಿತ್ತರು. ನಾಗರೀಕ ಶಿಷ್ಟಾಚಾರವನ್ನು ಅನುಸರಿಸುವ ಮಾದರಿ ಕುಟುಂಬ ನಮ್ಮ ದಾಗಬೇಕು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಉದ್ಯಮಿ ಹಾಗೂ ಕುಶಾಲನಗರ ದೇವಸ್ಥಾನಗಳ ಒಕ್ಕೂಟ ಸಮಿತಿಯ ಅಧ್ಯಕ್ಷ  ಎಂ.ಕೆ. ದಿನೇಶ್, ದೇವಸ್ಥಾನ ಸಂವರ್ಧನ ಸಮಿತಿಯಿಂದ ರಚನೆಯಾದ ಸುಜ್ಞಾನ ದೀಪಿಕೆಯ ಪಠ್ಯಕ್ರಮಗಳನ್ನು ಆಧರಿಸಿ ಬಾಲ ಸಂಸ್ಕಾರ ಮಂಟಪ ಎಂಬ ನಾಮಧೇಯದಲ್ಲಿ ಕುಶಾಲನಗರದ ಪ್ರತಿ ದೇವಾಲಯದಲ್ಲಿ ಬಾಲ ಸಂಸ್ಕಾರ ತರಗತಿಗಳನ್ನು ಪ್ರಾರಂಭಿಸಿದ್ದು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣದ ಮೂಲಕ ಸಂಸ್ಕೃತಿಯ ಜಾಗೃತಿಯ ಮೂಡಿಸುವ ಕಾರ್ಯವಾಗಬೇಕಿದೆ ಈ ನಿಟ್ಟಿನಲ್ಲಿ ಕೈಜೋಡಿಸುವ ಕೆಲಸ ನಮ್ಮ ನಿಮ್ಮೆಲ್ಲರ ದಾಗಬೇಕೆಂದು ತಿಳಿಸಿದರು.

ಪ್ರತಿ ಮನೆಯಿಂದ ತರುಣರು ಭಾರತದ ಸೇನೆಗೆ ಸೇರುವಂತ ಮನಸ್ಸು ಮಾಡಬೇಕು ಆ ಮುಖಾಂತರ ದೇಶ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಅದಕ್ಕಾಗಿ ನಾನು ಉಚಿತವಾಗಿ ತರಬೇತಿ ನೀಡುತ್ತಿದ್ದೂ ಆಸಕ್ತರು ತರಬೇತಿ ಪಡೆದು ದೇಶ ಸೇವೆ ಮಾಡುವುದರ ಮುಖಾಂತರ ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷ ನಿವೃತ್ತ ಸೇನಾನಿ ಅಮೆಮನೆ ಜನಾರ್ಧನ್  ತಿಳಿಸಿದರು.

ಕುಟುಂಬ ಪ್ರಬೋಧನ್ ತಾಲೂಕು ಸಂಯೋಜಕ್ ಮಹೇಶ್ ಅಮೀನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಸಂಘ ಚಾಲಕರಾದ ಡಾ. ಉದಯಕುಮಾರ್ , ಕುಟುಂಬ ಪ್ರಬೋಧನ್ ಜಿಲ್ಲಾ ಸಂಯೋಜಕರಾದ ಟಿಸಿ ಚಂದ್ರನ್, ಬಾಲ ಗೋಕುಲ ತಾಲೂಕು ಸಂಯೋಜಕಿ ದೀಪಾ ಸುರೇಂದ್ರ, ಜನಾರ್ಧನ್, ಅಮೃತ್ ರಾಜ್ ಮಧುಸೂದನ್, ನವ್ಯಾ ಇದ್ದರು ಶೋಭಾ ಭಟ್ ಅವರು ವೈಯಕ್ತಿಕ ಗೀತೆ ಹಾಡಿದರು ರಂಗಭಾರತಿ ಕಲಾಮಂದಿರಮ್ ನ ಕಲಾವಿದೆ ಕು. ತನಿಷಾ ಸ್ವಾಗತ ನೃತ್ಯ ಮಾಡಿದರು ಕೃತಿಕಾರವರು ನಿರೂಪಿಸಿದರು ಜ್ಯೋತಿಕಾ ಲವಕುಮಾರ್ ರವರ ವಂದನಾರ್ಪಣೆ ಹಾಗೂ ಒಂದೇ ಮಾತರಂ ಗೀತೆಯೊಂದಿಗೆ ಕಾರ್ಯ ಕ್ರಮ ಮುಕ್ತಾಯಗೊಂಡಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!