ಕಾರ್ಯಕ್ರಮ

ಕುಶಾಲನಗರ ಗಣಪತಿ ದೇವಸ್ಥಾನ‌ ಸಮಿತಿ ನಿರ್ಗಮಿತ ಅಧ್ಯಕ್ಷರಿಗೆ ಪೌರ ಸನ್ಮಾನ

ವಿವಿಧ ಸಂಘಸಂಸ್ಥೆಗಳಿಂದ ನೆರವೇರಿದ ಪೌರಸನ್ಮಾನ

ಕುಶಾಲನಗರ, ಸೆ 10:ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ‌ದ ಅಭಿವೃದ್ಧಿಗೆ ಸುದೀರ್ಘ 45 ವರ್ಷಗಳ‌ ಕಾಲ ಸೇವೆ ಸಲ್ಲಿಸಿ ಸಮಿತಿ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ವಿ.ಎನ್.ವಸಂತಕುಮಾರ್ ಅವರಿಗೆ ದೇವಸ್ಥಾನದ‌ ನೂತನ ಸಮಿತಿಯ ಆಡಳಿತ ಮಂಡಳಿ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ಕುಶಾಲನಗರದ ಮಾರುತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚುರಂಜನ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇವಾಲಯ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 1980 ರಲ್ಲಿ ಸಮಿತಿ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ‌ ವಸಂತಕುಮಾರ್ ಅವರ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳನ್ನು ನಡೆಸುವುದು ಕೇವಲ‌ ಸಂಪತ್ತಿನಿಂದ ಮಾತ್ರವಲ್ಲದೆ ಶುದ್ದ‌ ಮನಸ್ಥಿತಿ ಕೂಡ‌ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಜಾತಶತ್ರು ಗುಣವುಳ್ಳ ಕಾರಣ ವಸಂತಕುಮಾರ್ ಅವರಿಂದ ಈ ಕಾರ್ಯ ಸಾಧ್ಯವಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.

ವಿ.ಎನ್.ವಸಂತಕುಮಾರ್ ದಂಪತಿಗಳಿಗೆ
ಸನ್ಮಾನ ನೆರವೇರಿಸಿದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇವಾಲಯ ಕಟ್ಟುವುದು ಸುಲಭ, ದೇವಸ್ಥಾನ ಹಾಗೂ ದೇವರ ಕಾರ್ಯಗಳನ್ನು ಸುಸೂತ್ರವಾಗಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹ ಒಂದು ಜವಾಬ್ದಾರಿಯನ್ನು‌ ಅಚ್ಚುಕಟ್ಟಾಗಿ ಕಳೆದ 45 ವರ್ಷಗಳಿಂದ ನಿಭಾಯಿಸಿಕೊಂಡು ಬಂದಿರುವುದು‌ ಮಹತ್ಕಾರ್ಯ. ಇಂತಹ ಸೇವೆಯನ್ನು ಪರಿಗಣಿಸಿ ಊರಿನ ಸಂಘಸಂಸ್ಥೆಗಳು, ಗಣ್ಯರು ಅಭಿಮಾನದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ ಎಂದರು.

ದೇವಾಲಯ ಸಮಿತಿ ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿ, ಊರು ಹಾಗೂ ದೇವಾಲಯ‌ ಮತ್ತಷ್ಟು ಅಭಿವೃದ್ಧಿಗೊಂಡು‌ ಸಮೃದ್ದಿ ಕಾಣಬೇಕಿದೆ, ಧರ್ಮ ಹಾಗೂ ಸಂಸ್ಕೃತಿ, ಸದಾ ನೆಲೆನಿಲ್ಲಲು ಸೇವೆ ಸಲ್ಲಿಸುವಂತಹ‌ ವಾತಾವರಣ ವೃದ್ದಿಸಬೇಕೆಂಬ ವಸಂತಕುಮಾರ್ ಅವರ ಆಶಯ ಈಡೇರಲಿ ಎಂದರು.

ಸಮಿತಿಯ ನೂತನ ಅಧ್ಯಕ್ಷ ಎಂ.ಕೆ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಇತಿಹಾಸ ಹಾಗೂ ವಿ.ಎನ್.ವಸಂತಕುಮಾರ್ ಅವರ ಕೊಡುಗೆ ಹಾಗೂ ಸೇವೆಯ ಬಗ್ಗೆ ತಿಳಿಸಿದರು. ಸಮೃದ್ದ ಕುಟುಂಬದಿಂದ‌ ಬಂದಂತಹ ವಸಂತಕುಮಾರ್ ಅವರು ದೇವರ ಸೇವೆಗೆ ತಮ್ಮನ್ನು ಪ್ರಾಮಾಣಿಕವಾಗಿ ಸಮರ್ಪಿಸಿಕೊಂಡಿದ್ದರು.
300-400 ವರ್ಷ ಇತಿಹಾಸ ಹೊಂದಿರುವ‌ ಗಣಪತಿ ದೇವಾಲಯದ ಅಭಿವೃದ್ಧಿಗೆ ವಸಂತಕುಮಾರ್ ಅವರ ಕೊಡುಗೆ ಅನನ್ಯ ಎಂದ ತಿಳಿಸಿದರು.

ಸಮಿತಿ ನಿರ್ದೇಶಕ ಟಿ.ಆರ್.ಶರವಣಕುಮಾರ್, ಉದ್ಯಮಿ ವಿಶ್ವನಾಥನ್, ದೇವಾಲಯ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮಾತನಾಡಿದರು.

ಇದೇ ಸಂದರ್ಭ ನಿವೃತ್ತರಾಗಿರುವ ಸಮಿತಿಯ ಪದಾಧಿಕಾರಿಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಪ್ರಮುಖರಿಂದ ವಸಂತಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ.ಪುಂಡರೀಕಾಕ್ಷ, ಹೆಚ್.ಎಂ.ಚಂದ್ರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!