ಪ್ರತಿಭೆ

ರಾಜ್ಯ ಮಟ್ಟದ ನೃತ್ಯೋತ್ಸವಂ: ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಸಾಧನೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಾಟ್ಯ ವೈಭವ ನೃತ್ಯ ಅಕಾಡೆಮಿ ಆಯೋಜಿಸಿದ್ದ ಅಭಿನಯ ಲಹರಿ

ಕುಶಾಲನಗರ, ಆ 29: ದಿನಾಂಕ: 24-08-2024 ಶನಿವಾರ ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಾಟ್ಯ ವೈಭವ ನೃತ್ಯ ಅಕಾಡೆಮಿ ಆಯೋಜಿಸಿದ್ದ ಅಭಿನಯ ಲಹರಿ ರಾಜ್ಯ ಮಟ್ಟದ ನೃತ್ಯೋತ್ಸವಂ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಒಟ್ಟು 26 ಮಕ್ಕಳು ಭಾಗವಹಿಸಿದ್ದರು. ಕೊಡಗಿನ ಏಕೈಕ ನೃತ್ಯ ಶಾಲೆಯಾಗಿ ಭಾಗವಹಿಸಿ ಅದರಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಹಾಗೂ ಜೂನಿಯರ್ ವಿಭಾಗದಲ್ಲಿ ಸೆಕೆಂಡ್ ರನ್ನರಪ್ ಬಹುಮಾನವನ್ನು ತನ್ನದಾಗಿಸಿಕೊಂಡಿರುತ್ತದೆ.

ಈ ನೃತ್ಯ ಸ್ಪರ್ಧೆಯಲ್ಲಿ ಸುಮಾರು 25 ಕ್ಕೂ ಅಧಿಕ ಜಿಲ್ಲೆಗಳಿಂದ ನೃತ್ಯ ತಂಡಗಳು ಆಗಮಿಸಿ ಅದರಲ್ಲಿ ಕೊಡಗಿನ ಏಕೈಕ ನೃತ್ಯ ಶಾಲೆಯಾಗಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಮಕ್ಕಳು ಭಾಗವಹಿಸಿ ಅತ್ಯುತ್ತಮ  ನೃತ್ಯ ಪ್ರದರ್ಶನವನ್ನು ನೀಡಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಹಾಗೂ ನೆರೆದಿದ್ದ ಜನರಿಗೆ ಆಕರ್ಷಣೆಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಿಯಾಲಿಟಿ ಶೋ ಕೋಟಿಯೋಗ್ರಪರ್ ಹಾಗೂ ಚಲನ ಚಿತ್ರ ನೃತ್ಯ ಸಂಯೋಜಕರದ ಸತೀಶ್ ಸುವರ್ಣ  ಮತ್ತು ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ ಕೊಪ್ಪ ಇದರ ಮುಖ್ಯಸ್ಥ ಹಾಗೂ ನೃತ್ಯ ಸಂಯೋಜಕ ಅವಿನಾಶ್ ಹಾಗೂ ಡಿ.ಜೆ ಡ್ಯಾನ್ಸ್ ಸ್ಟುಡಿಯೋ ಹಾಸನದ ನೃತ್ಯ ಸಂಯೋಜಕ ಆಗಮಿಸಿದ್ದರು.

ಈ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ವಿದುಷಿ ಸುನೀತಾ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು. ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದಲ್ಲಿ ವಿಜೇತರಾದ ತಂಡಕ್ಕೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಪೋಷಕರು ಹಾಗೂ ಗ್ರಾಮಸ್ಥರು ಎಲ್ಲರೂ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!