ಕುಶಾಲನಗರ, ಜು 10: ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಮಾದಾಪಟ್ಟಣದ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಟಿ ವೈದ್ಯಕೀಯ ಕ್ಷೇತ್ರದಲ್ಲಿನ ಲೀಲಾವತಿ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ವೈಜ್ಞಾನಿಕ ವಿಜ್ಞಾನ ಸಂಶೋಧನಾ ಪರಿಷತ್ ವತಿಯಿಂದ ಕಾಯಕ ರತ್ನ ಪ್ರಶಸ್ತಿ ಘೋಷಿಸಿದ ಹಿನ್ನಲೆಯಲ್ಲಿ ಮಹಿಳಾ ವೇದಿಕೆ ಪದಾಧಿಕಾರಿಗಳು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಸಾವಿರಾರು ಶಿಶುಗಳನ್ನು ನಾಟಿ ಮದ್ದಿನಿಂದ ಗುಣಮುಖರಾಗಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಲೀಲಾವತ ಗಣಪತಿ ಅವರ ಸೇವೆಯನ್ನು ಕೊಂಡಾಡಲಾಯಿತು.
ಈ ಸಂದರ್ಭ ಮಾತನಾಡಿದ ಮಹಿಳಾ ವೇದಿಕೆ ಅಧ್ಯಕ್ಷೆ ಜೆ.ಫಿಲೋಮಿನಾ, ಸಮಾಜದಲ್ಲಿ ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ. ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯು ಕಾರಣಾಂತರಗಳಿಂದ ಕೆಲವು ವರ್ಷಗಳು ಕಾರ್ಯಸ್ಥಗಿತವಾಗಿತ್ತು. ಇದೀಗ ಸಮಿತಿಯು ಹೊಸ ಹುಮ್ಮಸ್ಸಿನೊಂದಿಗೆ ಮತ್ತೇ ಕಾರ್ಯಾರಂಭ ಮಾಡಿದೆ.
ಇಂದು ನಡೆದ ವೇದಿಕೆಯ ಮಾಸಿಕ ಸಭೆಯಲ್ಲಿ ನಮ್ಮ ಊರಿನವರಾದ ನಾಟಿ ವೈದ್ಯರ ಸೇವೆಯನ್ನು ಪರಿಗಣಿಸಿ ಅಭಿನಂದಿಸುವ ಬಗ್ಗೆ ತೀರ್ಮಾನಿಸಿ ಅವರಿಗೆ ಸನ್ಮಾನಿಸಲಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ದ ವೇದಿಕೆ ಸದಾ ಹೋರಾಡಲಿದೆ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಪುಟ್ಟತಾಯಮ್ಮ ಎಂಬವರು ಇದೀಗ ಸ್ವಂತ ಮನೆಯಲ್ಲೇ ಕಿರುಕುಳಕ್ಕೆ ಒಳಗಾಗುತ್ತಿದ್ದು ಈ ಬಗ್ಗೆ ವೇದಿಕೆ ಗಮನಕ್ಕೆ ತಂದ ಹಿನ್ನಲೆಯಲ್ಲಿ ಅವರಿಗೆ ನ್ಯಾಯ ಒದಗಿಸಿಕೊಡಲು ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ವೇದಿಕೆಯ ಗೌರವ ಸಲಹೆಗಾರರಾದ ವನಿತಾ ಚಂದ್ರಮೋಹನ್ ಅವರು ಮಾತನಾಡಿ, ಮಹಿಳೆಯರ ಪರ ದನಿಯಾಗಿರುವ ವೇದಿಕೆಯ ಹೋರಾಟಗಳಿಗೆ ಫಲ ದೊರೆತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಲಿ ಎಂದು ಆಶಿಸಿದರು.
ಈ ಸಂದರ್ಭ ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ಎಂ.ಪಿ.ಜಯಲಕ್ಷ್ಮಿ, ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಬಿ.ಪಾರ್ವತಿ, ಗೌರವಾಧ್ಯಕ್ಷರಾದ ಪದ್ಮಾವತಿ ಪರಮೇಶ್, ಸಂಘಟನಾ ಕಾರ್ಯದರ್ಶಿ ಜಯಾ ಪ್ರಕಾಶ್, ನಿರ್ದೇಶಕರಾದ ಜಯಶ್ರೀ ವಸಂತ್, ಭಾಗ್ಯ, ಲಲಿತಾ ತಿಮ್ಮಯ್ಯ, ಸಾವಿತ್ರಿ ರಾಜನ್, ಗೌರಿ, ಉಷಾ, ಪದ್ಮಾವತಿ ಕೃಷ್ಣೇಗೌಡ, ಪದ್ಮಾವತಿ ಪರಮೇಶ್ವರ್, ಸುನಂದಾ, ಲಲಿತಾ ಮೊಣ್ಣಪ್ಪ, ಧರಣಿ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!