ಕುಶಾಲನಗರ, ಮೇ 05: ಹಾರಂಗಿ ಅಣೆಕಟ್ಟೆ ಮುಖ್ಯ ನಾಲೆಯ 6 ನೇ ತೂಬಿನವರೆಗೆ ನಡೆಯುತ್ತಿರುವ 49 ಕೋಟಿ ವೆಚ್ಚದ ದುರಸ್ಥಿ ಕಾಮಗಾರಿ ಬಗ್ಗೆ ಅಪಸ್ವರ ಕೇಳಿಬಂದಿದೆ.
ನಾಲೆಯ ಕಾಂಕ್ರೀಟಿಕರಣ ಗುಣಮಟ್ಟ ಕಳಪೆಯಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅನುಪಸ್ಥಿತಿಯಲ್ಲಿ ಬೇಕಾಬಿಟ್ಟಿ ಕಾಮಗಾರಿ ನಿರ್ಮಿಸುತ್ತಿರುವ ಬಗ್ಗೆ ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ನಡೆಯುವ ಸಂದರ್ಭ ಸಂಬಂಧಿಸಿದ ಇಲಾಖೆ ಅಧಿಕಾರಿ ವರ್ಗದ ಸ್ಥಳದಲ್ಲಿರಬೇಕು. ಅಭಿಯಂತರರು, ಗುತ್ತಿಗೆದಾರರ ಅನುಪಸ್ಥಿತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಮಂದಿ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿದ್ದಾರೆ. ಸಮಪರ್ಕವಾಗಿ ಕ್ಯೂರಿಂಗ್ ನಡೆಸುತ್ತಿಲ್ಲ. ಕಿರು ಸೇತುವೆ ಕಾಮಗಾರಿಯಲ್ಲಿ ಲೋಪ ಕಂಡುಬರುತ್ತಿದೆ. ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಸೂಕ್ತವಾಗಿ ಪರಿಶೀಲನೆ ನಡೆಸುವಂತೆ ಸ್ಥಳೀಯ ರೈತರು, ನಿವಾಸಿಗಳು ಒತ್ತಾಯಿಸಿದ್ದಾರೆ.
Back to top button
error: Content is protected !!