ಕ್ರೈಂ

ಗುಡ್ಲೂರಿನಲ್ಲಿ ನಡೆದ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಕುಶಾಲನಗರ, ಮೇ 04:  ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ಲೂರು ಗ್ರಾಮದ ಚನ್ನಂಗಿ ನಿವಾಸಿ ಶ್ರೀ ತಂಗಪ್ಪನ್.ಕೆ.ಕೆ ಎಂಬವವರ ಮನೆಗೆ ದಿನಾಂಕ: 08-06-2022 ರಂದು ರಾತ್ರಿ ಸುಮಾರು 08.30 ಘಂಟೆ ಸಮಯದಲ್ಲಿ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ಮನೆಗೆ ನುಗ್ಗಿ ತಂಗಪ್ಪನ್.ಕೆ.ಕೆ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಮನೆಯಲ್ಲಿದ್ದ ಅಂದಾಜು ನಗದು ರೂ. 2,00,000/- ಹಾಗೂ ಪತ್ನಿಯ ಕುತ್ತಿಗೆಯಲ್ಲಿದ್ದ ಅಂದಾಜು 8 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಕುರಿತು ದೂರು ಸ್ವೀಕರಿಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಮಹೇಶ್ ಕುಮಾರ್, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಶ್ರೀ. ರಾಜು.ಪಿ.ಕೆ. ಸಿಪಿಐ, ಮಡಿಕೇರಿ ನಗರ ವೃತ್ತ, ಶ್ರೀ ರಾಘವೇಂದ್ರ, ಪಿಎಸ್‌ಐ, & ಶ್ರೀ. ಹಾಲಪ್ಪ ಆರ್.ಎಸ್. ಪಿಎಸ್‌ಐ (ಅಪರಾದ) ಹಾಗೂ ಸಿದ್ದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳು & ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ವೈಜ್ಞಾನಿಕ ಸಾಕ್ಷ್ಯಾಧರ (Scientific Evedence) ಗಳಿಂದ ಆರೋಪಿಗಳ ಸುಳಿವು ಸಿಕ್ಕಿದ್ದು, ವಿಶೇಷಾ

ತನಿಖಾ ತಂಡವು ದಿನಾಂಕ: 04-05-2024 ರಂದು 05 ಜನ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಬಂಧಿತ ಆರೋಪಿಗಳ ವಿವರ:
1. ಲವಕುಮಾರ್ ಎಂ.ಕೆ. 51 ವರ್ಷ, ಚನ್ನಂಗಿ.
2. ವಿನೋದ್ ಹೆಚ್.ಸಿ. 45 ವರ್ಷ, ಅಟ್ಟೂರು.
3. ಅನೀಶ್ ಪಿ.ಎಸ್, 33 ವರ್ಷ, ಅಯ್ಯಪ್ಪ ಬೆಟ್ಟ, ವಿರಾಜಪೇಟೆ ನಗರ.
4. ಪ್ರವೀಣ್ ಕುಮಾರ್. 46 ವರ್ಷ, ಅಟ್ಟೂರು.
5. ರಫೀಕ್ ಕೆ.ಈ, 45 ವರ್ಷ, ಭದ್ರಗೋಳ,
ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳ ವಿವರ :
1. 7.9 ಗ್ರಾಂ ಚಿನ್ನದ ಸರ. 2. 5 . 60,000/-
3 . ಆರೊಪಿಗಳು ಕೃತ್ಯಕ್ಕೆ ಬಳಸಿದ ವಾಹನ ಮಾರುತಿ 800.
4. ಆರೋಪಿ ಕೃತ್ಯದಿಂದ ದೊರೆತ ಹಣದಲ್ಲಿ ಮಾರುತಿ ಆಲ್ಟೋ ವಾಹನವನ್ನು ಖರೀದಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್,

Related Articles

Leave a Reply

Your email address will not be published. Required fields are marked *

Back to top button
error: Content is protected !!