ಕ್ರೈಂ

ಕುಶಾಲನಗರದಲ್ಲಿ ವ್ಯಕ್ತಿ ಅಪಹರಣ, ದರೋಡೆ: ಆರೋಪಿಗಳ‌ ಬಂಧನ

ಕೊಡಗು ಎಸ್ಪಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಕುಶಾಲನಗರ, ಏ 08:

ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:04/04/2024 ರಂದು ಕುಶಾಲನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವ್ಯಕ್ತಿಯನ್ನು ಬಲವಂತವಾಗಿ ಸ್ಥಾರ್ಪಿಯೋ ವಾಹನದಲ್ಲಿ ಅಪಹರಿಸಿ ಬೆಟ್ಟದಪುರ ರಸ್ತೆಯಲ್ಲಿ ಹೋಗಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ವ್ಯಕ್ತಿಯಿಂದ ಚಿನ್ನಾಭರಣಗಳು, ನಗದು, ಎ.ಟಿಎಮ್ ಕಾರ್ಡ್ ಹಾಗೂ ಮೊಬೈಲ್‌ಗಳನ್ನು ಬಲವಂತದಿಂದ ದೋಚಿದ್ದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

f

ದಿನಾಂಕ:04/04/2024 ರಂದು ಸಮಯ ರಾತ್ರಿ 07:30 ಗಂಟೆಗೆ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಕಣಿವೆ ಬಸವನಹಳ್ಳಿ ಗ್ರಾಮದ ಹೇಮಂತ್ ಎಂಬುವವರನ್ನು ಸ್ಥಾರ್ಪಿಯೋ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಲವಂತವಾಗಿ ಅಪಹರಿಸಿ ಬೆಟ್ಟದಪುರ ರಸ್ತೆಯಲ್ಲಿ ಹೋಗಿ ಚಾಕು ತೋರಿಸಿ ಬೆದರಿಕೆ ಹಾಕಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಹೇಮಂತ್ ರವರ ಕೈಯ್ಯಲ್ಲಿದ್ದ ಒಟ್ಟು 14 ಗ್ರಾಂ ತೂಕದ ಆರು ಚಿನ್ನದ ಉಂಗುರಗಳು, 7 ಗ್ರಾಂ ತೂಕದ ಒಂದು ಬ್ರಾಸ್ ಲೇಟ್, 12 ಗ್ರಾಂ ತೂಕದ ಒಂದು ಚಿನ್ನದ ಚೈನ್ ಹಾಗೂ ಲಾಕೆಟ್, ಎರಡು ಎ.ಟಿ.ಎಂ. ಕಾರ್ಡ್‌ ಗಳು, ಎರಡು ಮೊಬೈಲ್ ಮತ್ತು ಒಂದು ಸ್ಮಾರ್ಟ್ ವಾಚನ್ನು ಹಾಗೂ ಪರ್ಸ್ ಸಮೇತ 4000=00 ರೂ ನಗದು ಹಣವನ್ನು ದೋಚಿ ಪರಾರಿಯಾಗಿರುವುದಾಗಿರುವುದಲ್ಲದೆ ತನ್ನ ಸ್ಕೂಟಿಯನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಮಂತ್ ರವರು ದಿನಾಂಕ:05/04/2024 ರಂದು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ನೀಡಿದ ದೂರಿಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಮಹಿಳೆ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ:-

1) ಯಾಸಿನ್ ತಂದೆ ಇಮ್ಮಿಯಾಜ್, ಪ್ರಾಯ:21 ವರ್ಷ, ವ್ಯಾಪಾರ ವೃತ್ತಿ, 21 ನೇ ಕ್ರಾಸ್, 2 ನೇ ಹಂತ. ರಾಜೀವ್ ನಗರ ಮೈಸೂರು,

2) ರುಕ್ಸಾನ ಗಂಡ ಯಾಸಿನ್, ಪ್ರಾಯ:23 ವರ್ಷ, ರಾಜೀವ್ ನಗರ ಶ್ರೀರಾಮ್ ಪುರ. ಮೈಸೂರು 3) ಸಹಬಾಜ್ ತಂದೆ ಅಕ್ರಂ ಪ್ರಾಯ:28 ವರ್ಷ. ಡ್ರೈವರ್ ವೃತ್ತಿ ಗೌಸಿಯ ನಗರ. ರಿಯಾಜ್ ಜಿನ್ನಾ‌ಮಸೀದಿ ಹತ್ತಿರ ಮೈಸೂರು.

4) ಅಬ್ದಲ್ ತಂದೆ ಖಲೀಲ್ ಪಾಷ, ಪ್ರಾಯ:21 ವರ್ಷ, ವ್ಯಾಪಾರ ವೃತ್ತಿ ಗೌಸಿಯ ನಗರ 10 ನೇ ಕ್ರಾಸ್ ಮೈಸೂರು.

5) ಸುಹೇಲ್ ಅಹಮ್ಮದ್ ತಂದೆ ಮಮ್ಮದ್ ಗೌಸ್, ಪ್ರಾಯ: 30 ವರ್ಷ, ಆಟೋ ಚಾಲಕ, ರೇಣುಕಾದೇವಿ ಬ್ಲಾಕ್, 3 ನೇ ಕ್ರಾಸ್, ಗೌಸಿಯ ನಗರ ಮೈಸೂರು.

6) ಯಾಸಿನ್ ತಂದೆ ಸಮೀರ್ ಖಾನ್, ಪ್ರಾಯ:23 ವರ್ಷ, ಮೆಕ್ಯಾನಿಕ್. ಅಬ್ಬು ರಸ್ತೆ.ಹುಡುಗಿಯರ ಹಾಸ್ಟೇಲ್ ಬಳಿ.ಪಿರಿಯಾಪಟ್ಟಣ.ಮೈಸೂರು ಜಿಲ್ಲೆ

7) ಪೈಜಲ್ ಖಾನ್ ತಂದೆ ನಸರುಲ್ಲಾ ಖಾನ್, ಪ್ರಾಯ:23 ವರ್ಷ, ಗೌಸಿಯಾ ನಗರ ಮೈಸೂರು.

8) ಮುದಾಸಿರ್ ತಂದೆ ಪೌತಿ ಅಕ್ರಂ, ಪ್ರಾಯ:24 ವರ್ಷ.ಎಲೆಕ್ನಿಷಿಯನ್ ಕೆಲಸ, 3 ನೇ ಹಂತ, ರಾಜೀವ್ ನಗರ ಮೈಸೂರು.

9) ಪಿಳ್ಳೆ @ ಖುರಾನ್ ಗೌಸಿಯಾ ನಗರ.ಮೈಸೂರು (ತಲೆ ಮರೆಸಿಕೊಂಡಿರುತ್ತಾನೆ)

ಆರೋಪಿತರಿಂದ ವಶಪಡಿಸಿಕೊಂಡ ವಸ್ತುಗಳು:

1. ಕೃತ್ಯಕ್ಕೆ ಬಳಸಿದ ಕೆ.ಎ.01,ಎಂ.ಬಿ.0602 ರ ನೊಂದಣಿ ಸಂಖ್ಯೆಯ ಸ್ಥಾರ್ಪಿಯೋ ವಾಹನ 5 :3.50,000=00

2. 30 ಗ್ರಾಂ ತೂಕದ ಚಿನ್ನಾಭರಣಗಳು ಮೌಲ್ಯ : 1,82,000=00

3. ಎರಡು ಮೊಬೈಲ್‌ಗಳು ಮೌಲ್ಯ : 50,000/-

4. ಹೇಮಂತ್ ರವರಿಗೆ ಸೇರಿದ ಕೆ.ಎ.12.ಯು.7173 ರ ನೊಂದಣಿ ಸಂಖ್ಯೆಯ ಆಕ್ಸಿಸ್ ಸ್ಕೂಟಿ 5:30.000=00

5. ಆರೋಪಿತೆ ರುಕ್ಸಾನ ರವರು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟಿ ಮೌಲ್ಯ: 30.000=00

6. ನಗದು 5.000=00

7. ಆರೋಪಿತರಿಗೆ ಸೇರಿದ 7 ಮೊಬೈಲ್‌ಗಳು ಸೇರಿ ಒಟ್ಟು 5.97.000=00 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣವನ್ನು ಶ್ರೀ ರಾಮರಾಜನ್.ಕೆ, ಐಪಿಎಸ್. ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ಶ್ರೀ. ಸುಂದರ್ ರಾಜ್, ಕೆ.ಎಸ್. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ. ಶ್ರೀ ಗಂಗಾಧರಪ್ಪ.ಆ‌ರ್.ವಿ. ಪೊಲೀಸ್ ಉಪಾಧೀಕ್ಷಕರು ಸೋಮವಾರಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ್.ಬಿ.ಜಿ. ಪೋಲೀಸ್ ನಿರೀಕ್ಷಕರು ಕುಶಾಲನಗರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿ.ಎಸ್.ಐ, ಹಾಗೂ ಸಿಬ್ಬಂದಿಗಳ ಪರಿಶ್ರಮದಲ್ಲಿ ಪ್ರಕರಣವನ್ನು ಬೇದಿಸಿದ್ದು ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪ್ರಶಂಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!