ಕುಶಾಲನಗರ, ಏ 09: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕುಶಾಲನಗರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜಂಟಿ ಸಭೆ ನಡೆಸಿ ಚರ್ಚಿಸಿದರು.
ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ನಗರಾಧ್ಯಕ್ಷ ಎಂ.ಎಂ.ಚರಣ್, ಜೆಡಿಎಸ್ ನಗರಾಧ್ಯಕ್ಷ ಚಂದ್ರು ಅವರ ನೇತೃತ್ವದಲ್ಲಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚುನಾವಣೆ ಕಾರ್ಯಚಟುವಟಿಕೆಗಳ ಬಗ್ಗೆ ಪರಸ್ಪರ ಸಮಾಲೋಚಿಸಿ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಂಡರು.
ರಾಷ್ಟ್ರೀಯ ನಾಯಕರ ಸೂಚನೆಯಂತೆ ಬಿಜೆಪಿ ಜೆಡಿಎಸ್ ಜಂಟಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಿ ಈ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ ಎಂದು ಚರ್ಚಿಸಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಚರಣ್ ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗರೊಂದಿಗೆ ಜಂಟಿಯಾಗಿ ಚುನಾವಣಾ ಪ್ರಚಾರ, ಮತದಾರರ ಸಂಘಟನೆಗೆ ಒತ್ತು ನೀಡುವ ಮೂಲಕ ಯದುವೀರ್ ಅವರ ಗೆಲುವಿಗೆ ಶ್ರಮವಹಿಸಲಾಗುವುದು ಎಂದರು.
ಜೆಡಿಎಸ್ ಮುಖಂಡ ರಘು ಮಾತನಾಡಿ, ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುವಂತೆ ಕರೆ ನೀಡಿದರು.
ಈ ಸಂದರ್ಭ ಎರಡೂ ಪಕ್ಷಗಳ ಮುಖಂಡರಾದ ಬಿ.ಬಿ.ಭಾರತೀಶ್, ಕುಮಾರಪ್ಪ, ಉಮಾಶಂಕರ್, ಅಮೃತ್ರಾಜ್, ಜೈವರ್ಧನ್, ನಾರಾಯಣ, ಗೌತಮ್, ಪುಂಡರೀಕಾಕ್ಷ, ಎಂ.ಬಿ.ಸುರೇಶ್, ಎಂ.ಡಿ.ಕೃಷ್ಣಪ್ಪ, ವೈಶಾಖ್, ಪ್ರವೀಣ್, ಎಚ್.ಟಿ.ವಸಂತ, ವೆಂಕಟೇಶ್, ಗಿರೀಶ್, ಪ್ರವೀಣ್ ಮತ್ತಿತರರು ಇದ್ದರು.
Back to top button
error: Content is protected !!