ಟ್ರೆಂಡಿಂಗ್

ವಾಲ್ನೂರು ತ್ಯಾಗತ್ತೂರು ಶಾಲೆಯಲ್ಲಿ ಮೇಳೈಸಿದ ವಿಜ್ಞಾನ ಮೇಳ: ಗಮನ ಸೆಳೆದ ವಿಜ್ಞಾನ ಪ್ರದರ್ಶನ

ಕುಶಾಲನಗರ, ಫೆ 28: ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳ ಆಯೋಜಿಸಲಾಗಿತ್ತು.

ಶಾಲೆಯ ಬಾಲ ವಿಜ್ಞಾನಿಗಳು ತಯಾರಿಸಿದ ರಾಕೆಟ್ ಮಾದರಿಯನ್ನು ಉಡಾವಣೆಗೊಳಿಸುವ ಮೂಲಕ ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಶಿವಕುಮಾರ್ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭಾರತಕ್ಕೆ ಮತ್ತು ಏಷ್ಯಾ ಖಂಡಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ನೊಬೆಲ್ ಪಾರಿತೋಷಕ ತಂದುಕೊಟ್ಟ ಮಹಾನ್ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಜಗತ್ತಿಗೆ ಪರಿಚಯವಾದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಮೌಢ್ಯವನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಉಂಟುಮಾಡುವುದು ಮುಖ್ಯ ಆಶಯವಾಗಿದೆ. ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ‌ಇಂತಹ ಚಟುವಟಿಕೆಗಳು ಎಲ್ಲಾ ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕಿದೆ ಎಂದರು.

ಶಾಲೆಯ‌ ಮುಖ್ಯ ಶಿಕ್ಷಕ ಬಿ.ಎನ್.ವಸಂತಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ‌ ಮೂಲಕ ಅವರಲ್ಲಿ ಸಾಮಾನ್ಯ ಜ್ಞಾನ ವೃದ್ದಿಸುವ ಕಾರ್ಯ ಶಿಕ್ಷಕ ವರ್ಗದಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಪಠ್ಯದಷ್ಟೇ ಪ್ರಾತ್ಯಕ್ಷಿಕೆಗಳಿಗೆ ಒತ್ತು ನೀಡಿದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುತೂಹಲ‌ ಮತ್ತಷ್ಟು ಹೆಚ್ಚಿಸುತ್ತದೆ. ಅವರಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ವೇದಿಕೆ‌ ಕಲ್ಪಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮ ಸಂಯೋಜಕರಾದ ವಿಜ್ಞಾನ ಶಿಕ್ಷಕಿ ಜೈಸಿ ಜೋಸೆಫ್ ಮಾತನಾಡಿ, ವಿಜ್ಞಾನ ಮೇಳದಲ್ಲಿ ಮಕ್ಕಳಿಂದ ಪ್ರದರ್ಶನಗೊಂಡ ವಿವಿಧ ಬಗೆಯ ವಿಜ್ಞಾನ ಮಾದರಿಗಳ ಬಗ್ಗೆ ವಿವರಿಸಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿ.ಆರ್.ಪಿ.ಲೋಕೇಶ್ ಮಾತನಾಡಿ, ಸದಾ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ವೃದ್ದಿಸುವಲ್ಲಿ ವಾಲ್ನೂರು ತ್ಯಾಗತ್ತೂರು ಶಾಲೆಯ ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಅಫ್ಸತ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದಾನಿಗಳಾದ ನಳಿನಿ ಬೋಪಯ್ಯ, ಗ್ರಾಮಸ್ಥರಾದ ಜಯಲಕ್ಷ್ಮಿ ಉತ್ತಪ್ಪ ಮತ್ತು ಶಾಲಾ ಶಿಕ್ಷಕ ವೃಂದ, ಪೋಷಕರು ಪಾಲ್ಗೊಂಡಿದ್ದರು.

ಶಾಲೆಯ ಬಾಲ ವಿಜ್ಞಾನಿಗಳು ತಾವು ತಯಾರಿಸಿದ್ದ ವಿವಿಧ ಬಗೆಯ ವಿಜ್ಞಾನ ಮಾದರಿ ಪರಿಕರಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ನೆರದಿದ್ದವರಿಗೆ ಮಾಹಿತಿ ಒದಗಿಸಿ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!