ಕುಶಾಲನಗರ, ಫೆ 13:ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದು ಹುದುಗೂರು ಗ್ರಾಮದ ಶ್ರೀಮತಿ ಸರೋಜಾ ರವರು ದಿನಾಂಕ 07-11-2022 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿದ್ದ ಸರೋಜಾ ರವರ ಮಗಳು ಲಕ್ಷ್ಮಿಯ ಗಂಡ ವಸಂತ ನು ಮನೆಯೊಳಗೆ ನುಗ್ಗಿ, ಸರೋಜಾರವರ ನೈಟಿಯನ್ನು ಎಳೆದಾಡಿ ನೆಲದ ಮೇಲೆ ಬೀಳಿಸಿ, ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ, ಸರೋಜಾ ರವರು ಆತನನ್ನು ದೂಡಿಹಾಕಿ ಕಿರುಚಿಕೊಂಡಾಗ ವಸಂತನು ಸ್ಥಳದಿಂದ ಓಡಿಹೋಗಿದ್ದು, ಇದರಿಂದ ಬೇಸರಗೊಂಡ ಸರೋಜಾ ರವರು ವಿಷ ಕುಡಿಯಲು ಯತ್ನಿಸಿದಾಗ, ಆರೋಪಿ ವಸಂತ ಪುನಃ ಬಂದು ವಿಷ ಬಾಟಲಿಯನ್ನು ಕಿತ್ತುಕೊಂಡು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಸರೋಜಾ ರವರು ನೀಡಿದ ದೂರಿಗೆ ಪ್ರಕರಣ ದಾಖಲಾಗಿತ್ತು.
ನಂತರ ಪ್ರಕರಣದ ತನಿಖೆಯನ್ನು ಕೈಗೊಂಡು ತನಿಖೆ ಪೂರೈಸಿ ಕುಶಾಲನಗರ ಗ್ರಾಮಾಂತರ ಠಾಣೆಯ ಹಿಂದಿನ ಪಿ.ಎಸ್.ಐ ಶ್ರೀ. ಚಂದ್ರಶೇಖರ ರವರು ದಿನಾಂಕ 03-01-2023 ರಂದು ಮಡಿಕೇರಿ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಿ ವಸಂತ ರವರ ವಿರುದ್ದ ದೋಷರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯು ಮಡಿಕೇರಿ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು, ಆರೋಪಿ ವಸಂತ ಹೆಚ್.ಆರ್ ತಂದೆ ಲೇಟ್ ರಾಜು, ಪ್ರಾಯ 38 ವರ್ಷ, ಹುದುಗೂರು ಗ್ರಾಮ ಇವರ ವಿರುದ್ಧ ಆರೋಪವು ಸಾಭೀತಾಗಿದ್ದರಿಂದ ದಿನಾಂಕ 12-02-2024 ರಂದು ಮಾನ್ಯ ನ್ಯಾಯಾಧೀಶರಾದ ಶ್ರೀಮತಿ, ಪ್ರಶಾಂತಿನಿ ರವರು ಕಲಂ 448 ಐಪಿಸಿಗೆ 1 ವರ್ಷ ಸಜೆ 2,000 ರೂ ದಂಢ, ಡಂಡ ಕಟ್ಟಲು ತಪ್ಪಿದರೆ 1 ತಿಂಗಳ ಸಜೆ, 376 ರೆ/ವಿ 511 ಐಪಿಸಿಗೆ 5 ವರ್ಷ ಸಜೆ, 10,000 ರೂ ದಂಢ, ತಪ್ಪಿದರೆ 6 ತಿಂಗಳ ಸಜೆ ಅನುಭವಿಸುವಂತೆ ಆದೇಶ ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಮಹಮ್ಮದ್ ಶೌಕತ್ ಆಲಿ ರವರು ವಾದ ಮಂಡಿಸಿರುತ್ತಾರೆ.
Back to top button
error: Content is protected !!